ಕೋವಿಡ್‌: ಕಿರಣ್ ಮೋರೆ ಗುಣಮುಖ ಮುಂಬೈ :ಕೋವಿಡ್‌–19 ಸೋಂಕಿತರಾಗಿದ್ದ, ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್‌ ಕೀಪರ್ ಕಿರಣ್ ಮೋರೆ ಚೇತರಿಸಿಕೊಂಡಿದ್ದಾರೆ. ಅವರು ತಂಡದ ಬಯೋಬಬಲ್ ಸೇರಿಕೊಳ್ಳಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಫ್ರಾಂಚೈಸ್ ಬುಧವಾರ ಹೇಳಿದೆ. ಮೋರೆ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ವಿಕೆಟ್‌ ಕೀಪಿಂಗ್ ಹಾಗೂ ಪ್ರತಿಭಾ ಶೋಧದ ಸಲಹೆಗಾರರಾಗಿದ್ದಾರೆ. 58 ವರ್ಷದ ಮೋರೆ ಅವರಿಗೆ ಏಪ್ರಿಲ್ ಆರರಂದು ಸೋಂಕು ದೃಢಪಟ್ಟಿತ್ತು. ‘ಕಿರಣ್ ಮೋರೆ ಗುಣಮುಖರಾಗಿದ್ದಾರೆ. ವೈದ್ಯಕೀಯ ನಿಗಾದಲ್ಲಿ ಪ್ರತ್ಯೇಕವಾಸವನ್ನೂ ಪೂರ್ಣಗೊಳಿಸಿದ್ದಾರೆ‘ ಎಂದು ಫ್ರಾಂಚೈಸ್ ಟ್ವೀಟ್ ಮಾಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.