ಪಾಕಿಸ್ತಾನಕ್ಕೆ ಹೋಗುವುದಾಗಿ ಗೇಲ್ ಟ್ವೀಟ್; ಗೊಂದಲದಲ್ಲಿ ಅಭಿಮಾನಿಗಳು! ದುಬೈ: ಭದ್ರತಾ ಕಾರಣಗಳನ್ನು ಒಡ್ಡಿರುವ ನ್ಯೂಜಿಲೆಂಡ್, ಪಾಕಿಸ್ತಾನ ಪ್ರವಾಸವನ್ನು ಏಕಾಏಕಿ ಮೊಟಕುಗೊಳಿಸಿ ತವರಿಗೆ ಮರಳಿದೆ. ಕೊನೆಯ ಕ್ಷಣದಲ್ಲಿ ನ್ಯೂಜಿಲೆಂಡ್ ತಂಡವು ಪ್ರವಾಸವನ್ನು ಮೊಟಕುಗೊಳಿಸಿರುವುದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ. ಏತನ್ಮಧ್ಯೆ ವೆಸ್ಟ್‌ಇಂಡೀಸ್‌ನಸ್ಟಾರ್ ಆಟಗಾರ ಕ್ರಿಸ್ ಗೇಲ್ ತಾವು ಪಾಕಿಸ್ತಾನಕ್ಕೆ ಹೋಗುವುದಾಗಿ ಟ್ವೀಟ್ ಮಾಡಿರುವುದು ಗೊಂದಲಕ್ಕೆ ಕಾರಣವಾಗಿದೆ. ಇದನ್ನೂ ಓದಿ:ಬಿಗಿ ಭದ್ರತೆಯಲ್ಲಿ ಪಾಕಿಸ್ತಾನ ತೊರೆಯಲು ಸಜ್ಜಾದ ನ್ಯೂಜಿಲೆಂಡ್ ತಂಡ ’ , ? 😉🙌🏿 'ನಾನು ನಾಳೆ ಪಾಕಿಸ್ತಾನಕ್ಕೆ ಹೋಗುತ್ತಿದ್ದೇನೆ. ನನ್ನೊಂದಿಗೆ ಯಾರೆಲ್ಲ ಬರುತ್ತೀರಿ?' ಎಂದು ಟ್ವೀಟ್ ಮಾಡಿದ್ದಾರೆ. ಗೇಲ್ ಟ್ಟೀಟ್ ಅನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ಹಂಚಿದೆ. ಈ ನಡುವೆ ಅಭಿಮಾನಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದ್ದು, ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಗೇಲ್ ಟ್ವೀಟ್ ಕೊನೆಗೆ ಕಣ್ಸನ್ನೆ ಮಾಡುವ ಇಮೋಜಿ ಸಹ ಹಂಚಿದ್ದಾರೆ. ಅಂದ ಹಾಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಪಂಜಾಬ್ ಕಿಂಗ್ಸ್ ತಂಡವನ್ನು ಗೇಲ್ ಪ್ರತಿನಿಧಿಸುತ್ತಾರೆ. ../9s6zsakqpT 😁😁😁😁 🤣🤣🤣🤣🤣🤣🤣🤣🤣🤣🤣 ??? ../DDK5uX2VMa ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.