ರಿಚರ್ಡ್ಸನ್ ಬದಲಿಗೆ ಕುಗೆಲಿನ್ ಆರ್‌ಸಿಬಿಗೆ ಬೆಂಗಳೂರು: ತಂಡ ತೊರೆದು ತವರಿಗೆ ಮರಳಿರುವ ಆಸ್ಟ್ರೇಲಿಯಾದ ಕೇನ್ ರಿಚರ್ಡ್ಸನ್ ಬದಲಿಗೆ ನ್ಯೂಜಿಲೆಂಡ್‌ನ ಸ್ಕಾಟ್ ಕುಗೆಲಿನ್ ಅವರನ್ನು ಕರೆಸಿಕೊಳ್ಳಲಾಗಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಕಟಣೆ ತಿಳಿಸಿದೆ. ವೇಗದ ಬೌಲರ್ ಹಾಗೂ ಆಲ್‌ರೌಂಡರ್ ಆಗಿರುವ ಕುಗೆಲಿನ್ ಈ ವರೆಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ನೆಟ್ ಬೌಲರ್ ಆಗಿದ್ದರು. ಬಬಲ್‌ನಿಂದ ಬಬಲ್‌ಗೆ ಸ್ಥಳಾಂತರದ ಅವಕಾಶವನ್ನು ಬಳಸಿಕೊಂಡು ಅವರನ್ನು ಬೆಂಗಳೂರು ತಂಡ ಮಂಗಳವಾರ ತಂಡಕ್ಕೆ ಸೇರಿಸಿಕೊಂಡಿದೆ. ಅಹಮದಾಬಾದ್‌ನಲ್ಲಿ ಬೆಂಗಳೂರು ತಂಡದ ಬಯೊಬಲ್‌ಗೆ ಅವರು ಪ್ರವೇಶಿಸಿದ್ದಾರೆ. ಇದಕ್ಕೂ ಮೊದಲು ಕೋವಿಡ್ –19ರ ಪರೀಕ್ಷೆ ನಡೆಸಿದ್ದು ವರದಿ ನೆಗೆಟಿವ್ ಬಂದಿದೆ ಎಂದು ತಿಳಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.