ಪಾಕ್‌ ಕ್ರಿಕೆಟ್‌ ಅನ್ನು ನ್ಯೂಜಿಲೆಂಡ್‌ ಕೊಂದುಹಾಕಿತು: ಶೋಯಬ್‌ ಅಖ್ತರ್‌ ಪಾಕ್‌ ಪ್ರವಾಸದಿಂದ ಹಠಾತ್ತನೇ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿರುವ ನ್ಯೂಜಿಲೆಂಡ್‌ ವಿರುದ್ಧ ಪಾಕಿಸ್ತಾನದ ಕ್ರಿಕೆಟಿಗರು ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಮಾಜಿ ವೇಗಿ ಶೋಯಬ್‌ ಅಖ್ತರ್‌, 'ಪಾಕಿಸ್ತಾನ ಕ್ರಿಕೆಟ್‌ ಅನ್ನು ನ್ಯೂಜಿಲೆಂಡ್‌ ಕೊಂದುಹಾಕಿತು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 😡😡 ನ್ಯೂಜಿಲೆಂಡ್‌ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿರುವ ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಬಾಬರ್ ಆಜಂ, 'ಸರಣಿಯ ಹಠಾತ್ ಮುಂದೂಡಿಕೆಯಿಂದ ತೀವ್ರ ನಿರಾಶೆಯಾಗಿದೆ' ಎಂದು ತಿಳಿಸಿದ್ದಾರೆ. 'ಪಾಕಿಸ್ತಾನದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಲ್ಲಿ ಈ ಸರಣಿಯು ಸಂತಸ ಉಂಟು ಮಾಡಿತ್ತು. ನಮ್ಮ ಭದ್ರತಾ ಸಂಸ್ಥೆಗಳ ಸಾಮರ್ಥ್ಯದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಭದ್ರತಾ ಸಂಸ್ಥೆಗಳು ನಮ್ಮ ಹೆಮ್ಮೆ. ಪಾಕಿಸ್ತಾನ್‌ ಜಿಂದಾಬಾದ್' ಎಂದು ಆಜಂ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. , . ' . ! ! ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಸಹ ನ್ಯೂಜಿಲೆಂಡ್‌ ನಿರ್ಧಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. - !! @ ? ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಶುಕ್ರವಾರ ಮೊದಲ ಏಕದಿನ ಪಂದ್ಯ ನಿಗದಿಯಾಗಿತ್ತು. ಆದರೆ, ಈ ಪ್ರವಾಸವನ್ನು ಮೊಟಕುಗೊಳಿಸಲು ನ್ಯೂಜಿಲೆಂಡ್‌ ತಂಡವು ನಿರ್ಧಾರ ತೆಗೆದುಕೊಂಡಿದೆ. ನ್ಯೂಜಿಲೆಂಡ್‌ ನಿರ್ಧಾರದ ವಿರುದ್ಧ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯೂ ಹರಿಹಾಯ್ದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.