ಕೋವಿಡ್: ವೇದಾ ಕೃಷ್ಣಮೂರ್ತಿ ಅವರ ಸಹೋದರಿ ವತ್ಸಲಾ ಶಿವಕುಮಾರ್ ಸಾವು ಕಡೂರು:ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರ ಸಹೋದರಿ ವತ್ಸಲಾ ಶಿವಕುಮಾರ್ (42) ಅವರು ಕೋವಿಡ್-19 ನಿಂದ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರು ಬುಧವಾರ ಮನೆಗೆ ಮರಳಿದ್ದರು. ತಡರಾತ್ರಿ ವತ್ಸಲಾ ಅವರ ಆರೋಗ್ಯ ಏರುಪೇರಾಗಿದ್ದು, ಮೃತಪಟ್ಟಿದ್ದಾರೆ. ಕೆಲ‌ದಿನಗಳ ಹಿಂದೆ ವೇದಾ ಕೃಷ್ಣಮೂರ್ತಿ ಅವರ ತಾಯಿ ಚೆಲುವಾಂಬ (63) ಕೋವಿಡ್-19 ನಿಂದ ಮೃತಪಟ್ಟಿದ್ದರು. ಕಡೂರಿನ ಜಮೀನಿನಲ್ಲಿ ಗುರುವಾರ ವತ್ಸಲಾ ಮೃತದೇಹದ ಅಂತ್ಯಕ್ರಿಯೆ ಮಾಡಲಾಗಿದೆ. ಓದಿ: ವೇದಾ ಕೃಷ್ಣಮೂರ್ತಿ ಅವರ ತಾಯಿ ಚಲುವಾಂಬದೇವಿ ಕೋವಿಡ್‌ನಿಂದ ನಿಧನ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.