ಬಿದಿರಿನ ಬ್ಯಾಟ್ ಬಳಕೆ ನಿಯಮಬಾಹಿರ: ಎಂಸಿಸಿ ಲಂಡನ್: ಕ್ರಿಕೆಟ್‌ನಲ್ಲಿ ಬಿದಿರಿನಿಂದ ತಯಾರಿಸಿದ ಬ್ಯಾಟ್‌ಗಳನ್ನು ಬಳಸುವುದು ನಿಯಮಬಾಹಿರಎಂದು ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ತಿಳಿಸಿದೆ. ಕೆಂಬ್ರಿಜ್ ವಿಶ್ವವಿದ್ಯಾಲಯದ ದರ್ಶಿಲ್ ಶಾ ಮತ್ತು ಬೆನ್ ಟಿಕ್ಲರ್–ಡೆವಿಸ್ ಅವರು ಸಂಶೋನೆ ಮಾಡಿ, ಬಂಬೂ ಬ್ಯಾಟ್‌ಗಳು ಸಾಂಪ್ರದಾಯಿಕ ಬ್ಯಾಟ್‌ಗಳಿಗಿಂತ ಕಡಿಮೆ ಬೆಲೆಯುಳ್ಳವು ಮತ್ತು ಗುಣಮಟ್ಟದಲ್ಲಿ ಉತ್ತಮವಾಗಿರುತ್ತವೆ. ಆದ್ದರಿಂದ ವಿಲ್ಲೊ ಬ್ಯಾಟ್‌ಗಳಿಗಿಂತ ಇದನ್ನೇ ಬಳಸಬಹುದು ಎಂದು ಶಿಫಾರಸು ಮಾಡಿದ್ದರು. ಓದಿ:ಭಾರತ ತಂಡದ ನಾಯಕತ್ವಕ್ಕೆ ಹಾರ್ದಿಕ್–ಧವನ್ ಸ್ಪರ್ಧೆ? ಇದಕ್ಕೆ ಪ್ರತಿಕ್ರಿಯಿಸಿರುವ ಎಂಸಿಸಿ, ‘ಕ್ರಿಕೆಟ್‌ ನಿಯಮ 5.3.3ರ ಪ್ರಕಾರ ಕಟ್ಟಿಗೆ ಅಥವಾ ಮರದಿಂದ ತಯಾರಿಸಿದ ಬ್ಯಾಟ್‌ಗಳನ್ನೇ ಬಳಸಬೇಕು. ಬಿದಿರು ಹುಲ್ಲು ಜಾತಿಯದ್ದು. ಆದ್ದರಿಂದ ಅದು ಕಟ್ಟಿಗೆಯಲ್ಲ. ಒಂದೊಮ್ಮೆ ಬಿದಿರು ಬ್ಯಾಟ್‌ ಬಳಸಬೇಕಾದರೆ ನಿಯಮ ತಿದ್ದುಪಡಿ ಅಗತ್ಯವಿದೆ‘ ಎಂದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.