ಭಾರಿ ಮೊತ್ತದ ದಂಡ ತೆತ್ತ ಉಮರ್ ಅಕ್ಮಲ್ ಕರಾಚಿ: ಭ್ರಷ್ಟಾಚಾರ ತಡೆ ಪುನಶ್ಚೇತನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಪಾಕಿಸ್ತಾನ ಕ್ರಿಕೆಟಿಗ ಉಮರ್ ಅಕ್ಮಲ್ ಅವರು ಪಾಕ್ ಕ್ರಿಕೆಟ್ ಮಂಡಳಿಗೆ ₹ 45 ಲಕ್ಷ ದಂಡ ಕಟ್ಟಿದ್ದಾರೆ. ‘ಭ್ರಷ್ಟಾಚಾರ ನಿಗ್ರಹ ಘಟಕದ ಪುನಶ್ಚೇತನದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅಕ್ಮಲ್ ಅವರು ದಂಡ ಕಟ್ಟಿದ್ದಾರೆ. ಈಗ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ‘ ಎಂದು ಮೂಲಗಳು ತಿಳಿಸಿವೆ. ‘ಪುನಶ್ಚೇತನ ಕಾರ್ಯಕ್ರಮದಲ್ಲಿ ಅವರ ಸಾಧನೆಯು ತೃಪ್ತಿಕರವಾಗಿದ್ದರೆ ಕ್ರಿಕೆಟ್ ಮೈದಾನಕ್ಕೆ ಮರಳುವ ಅವಕಾಶ ಗಿಟ್ಟಿಸಬಹುದು. ಆದರೆ ಅದಕ್ಕೆ ಇನ್ನೂ ಬಹಳ ಸಮಯ ಇದೆ‘ ಎಂದೂ ಮೂಲಗಳು ತಿಳಿಸಿವೆ. ಭ್ರಷ್ಟಾಚಾರ ತಡೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅಕ್ಮಲ್ ಅವರ ಮೇಲೆ 2020ರ ಫೆಬ್ರುವರಿಯಿಂದ ಕ್ರಿಕೆಟ್‌ ಆಡದಂತೆ ನಿಷೇಧ ಹೇರಲಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.