ಒಲಿಂಪಿಕ್ಸ್‌ನಿಂದ ಹಿಂದೆ ಸರಿದ ಮರಿನ್; ಸಿಂಧು ಬೇಸರ ನವದೆಹಲಿ (ಪಿಟಿಐ): ಟೊಕಿಯೊ ಒಲಿಂಪಿಕ್ಸ್‌ನಿಂದ ಸ್ಪೇನ್‌ನ ಬ್ಯಾಡ್ಮಿಂಟನ್ ತಾರೆ ಕರೊಲಿನಾ ಮರಿನ್ ಹಿಂದೆ ಸರಿದಿರುವುದಕ್ಕೆ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಬೇಸರ ವ್ಯಕ್ತಪಡಿಸಿದ್ದಾರೆ. ಮರಿನ್ ಮೊಣಕಾಲಿಗೆ ಗಾಯವಾಗಿರುವುದರಿಂದ ಅವರು ಒಲಿಂಪಿಕ್ಸ್‌ನಲ್ಲಿ ಆಡುತ್ತಿಲ್ಲ. ತಮ್ಮ ಗೆಳತಿ ಮರಿನ್‌ಗೆ ಟ್ವೀಟ್ ಮಾಡಿರುವ ಸಿಂಧು, ‘ನೀವು ಗಾಯಗೊಂಡಿರುವ ವಿಷಯ ತಿಳಿದು ಬೇಸರವಾಯಿತು. ಶೀಘ್ರ ಗುಣಮುಖರಾಗಿ, ಮತ್ತಷ್ಟು ಬಲಶಾಲಿಯಾಗಿ ಕಣಕ್ಕೆ ಮರಳಿರಿ‘ ಎಂದು ಹಾರೈಸಿದ್ದಾರೆ. ರಿಯೊ ಒಲಿಂಪಿಕ್ಸ್‌ನ ಮಹಿಳೆಯರ ಸಿಂಗಲ್ಸ್‌ ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ತಾವು ಮತ್ತು ಮರಿನ್ ಮುಖಾಮುಖಿಯಾಗಿದ್ದನ್ನೂ ಸಿಂಧು ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ. ಶನಿವಾರ ಅಭ್ಯಾಸ ನಡೆಸುವ ಸಂದರ್ಭದಲ್ಲಿ 27 ವರ್ಷದ ಮರಿನ್ ಬಲಮೊಣಕಾಲಿನ ನೋವಿನಿಂದ ಬಳಲಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.