2021: ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಶೇ 15 ಷೇರು ಖರೀದಿಸಿದ ರೆಡ್‌ಬರ್ಡ್ ಬೆಂಗಳೂರು: ಹೂಡಿಕೆ ಸಂಸ್ಥೆ ರೆಡ್‌ಬರ್ಡ್ ಕ್ಯಾಪಿಟಲ್ ಪಾರ್ಟ್‌ನರ್ಸ್, ಐಪಿಎಲ್ ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಶೇ 15 ಷೇರು ಖರೀದಿಸಿದೆ. ರೆಡ್‌ಬರ್ಡ್, ಪ್ರಸಿದ್ಧ ಫುಟ್ಬಾಲ್ ಕ್ಲಬ್ ಲಿವರ್‌ಪೂಲ್‌ ಮತ್ತು ಬೇಸ್‌ಬಾಲ್ ಟೀಮ್ ಬಾಸ್ಟನ್ ರೆಡ್ ಸಾಕ್ಸ್ ತಂಡದಲ್ಲಿ ಕೂಡ ಹೂಡಿಕೆ ಮಾಡಿದೆ. ಐಪಿಎಲ್ ತಂಡ ರಾಜಸ್ಥಾನ್ ರಾಯಲ್ಸ್‌ನಲ್ಲಿ ರೆಡ್‌ಬರ್ಡ್ ಹೂಡಿಕೆಯ ಮೊತ್ತ ಎಷ್ಟೆಂದು ಬಹಿರಂಗವಾಗಿಲ್ಲ. ಮನೋಜ್ ಬಾದಲೆ ಒಡೆತನದ ಎಮರ್ಜಿಂಗ್ ಮೀಡಿಯಾ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಹೆಚ್ಚಿನ ಷೇರು ಪಾಲು ಹೊಂದಿದೆ. ಹೊಸ ಹೂಡಿಕೆ ಕುರಿತಂತೆ ರಾಜಸ್ಥಾನ್ ರಾಯಲ್ಸ್ ತಂಡದ ವೆಬ್‌ಸೈಟ್‌ನಲ್ಲಿ ವಿವರ ನೀಡಲಾಗಿದ್ದು, ರೆಡ್‌ಬರ್ಡ್ ಹೂಡಿಕೆ ಶೇ 15 ಇದ್ದರೆ, ಎಮರ್ಜಿಂಗ್ ಮೀಡಿಯಾ ಪಾಲು ಶೇ 51ರಿಂದ ಶೇ 65ಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ. : ಡ್ಯೂಕ್ಸ್‌ ಬಾಲ್ ಲೀಲೆ ಐಪಿಎಲ್ ಪ್ರಾಂಚೈಸಿ ನಿಯಮಗಳಿಗನುಸಾರ ಹೂಡಿಕೆ ನಡೆಸಲಾಗಿದೆ ಎಂದು ತಂಡ ಹೇಳಿದೆ. ಮುರುಳೀಧರನ್ ಎದುರು ಆಡುವಾಗ ಬ್ಯಾಟ್ಸ್‌ಮನ್‌ಗಳ ಕಣ್ಣಲ್ಲಿ ಭಯ ಇರುತ್ತೆ: ಲಕ್ಷ್ಮಣ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.