ಪಾಕ್ ಸ್ವಾತಂತ್ರ್ಯ ದಿನಾಚರಣೆಗೆ ವಿಷ್ ಮಾಡಿ ಟ್ರೋಲ್‌ಗೆ ಗುರಿಯಾದ ಕಮ್ರಾನ್ ಅಕ್ಮಲ್ ನವದೆಹಲಿ: ಪಾಕಿಸ್ತಾನದಲ್ಲಿ ಆಗಸ್ಟ್ 14ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ನಡುವೆ ಶುಭಾಶಯ ಕೋರಿರುವ ಪಾಕಿಸ್ತಾನದ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಟ್ರೋಲ್‌ಗೆ ಗುರಿಯಾಗಿದ್ದಾರೆ. ಆಂಗ್ಲ ಭಾಷೆಯಲ್ಲಿ ಇಂಡಿಪೆಂಡೆನ್ಸ್ ಡೇ ಪದವನ್ನು ತಪ್ಪಾಗಿ ಉಲ್ಲೇಖಿಸುವ () ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದನ್ನೂ ಓದಿ:ಕ್ರಿಕೆಟ್‌ಗೆ 'ಯುವ’ ನಾಯಕ ಉನ್ಮುಕ್ತ್ ಚಾಂದ್ ವಿದಾಯ ಈ ಹಿಂದೆಯೂ ಆಂಗ್ಲ ಪದಗಳನ್ನು ತಪ್ಪಾಗಿ ಉಲ್ಲೇಖಿಸುವ ಮೂಲಕ ಕಮ್ರಾನ್ ಎಡವಟ್ಟು ಮಾಡಿಕೊಂಡಿದ್ದರು. ಹಲವು ಬಾರಿ ಕ್ರಿಕೆಟ್ ಸಂದರ್ಶನದ ವೇಳೆಯೂ ಕಮ್ರಾನ್ ಪೇಚಿಗೆ ಸಿಲುಕಿದ್ದರು. ../ZG397jz3RT 'ಆಂಗ್ಲ ಪದಗಳನ್ನು ತಪ್ಪಾಗಿ ಉಲ್ಲೇಖಿಸುವ ಮೂಲಕ ಬ್ರಿಟಿಷರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿರುವ ಏಕೈಕ ವ್ಯಕ್ತಿ ನೀವು' ಎಂದು ಟ್ವಿಟರ್ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಪಾಕಿಸ್ತಾನಕ್ಕೆ ಬೇರೆಯೇ ಆದ ಪದಕೋಶವಿದೆ ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರ ಕಾಲೆಳೆದಿದ್ದಾರೆ. ಕೆಲವರ ಕೀಬೋರ್ಡ್‌ಗಳಲ್ಲಿ 'ಆಟೋ-ಕರೆಕ್ಟ್' ಆಯ್ಕೆ ಇರುತ್ತದೆ. ಆದರೆ ಕಮ್ರಾನ್ ಕಿಬೋರ್ಡ್ 'ಆಟೋ-ವ್ರಾಂಗ್' ಆಗಿದೆ ಎಂದು ಮಗದೊಬ್ಬರು ಟ್ರೋಲ್ ಮಾಡಿದ್ದಾರೆ. , .. ! , -.🤣🤣🤣😂😂😭🤣😂😂🤣😂🤣😂 , 🤪@Umar96Akmal ../WSuDRbf1nf ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.