: ಭಾರತೀಯ ವೇಗಿಗಳ ಮಿಂಚಿನ ದಾಳಿ, ಗೆಲುವಿನ ಆಸೆ ಜೀವಂತ ಲಂಡನ್: ಲಾರ್ಡ್ಸ್‌ ಅಂಗಳದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಕ್ರಿಕೆಟ್‌ನ ಅಂತಿಮ ದಿನ ಇಂಗ್ಲೆಂಡ್ ವಿರುದ್ಧ ಭಾರತದ ಗೆಲುವಿನ ಆಸೆ ಮತ್ತೆ ಚಿಗುರಿದೆ. ನಾಲ್ಕನೇ ದಿನದಾಟದಲ್ಲಿ ಆತಂಕದ ಸುಳಿಯಲ್ಲಿದ್ದ ಭಾರತ ತಂಡವು ಐದನೇ ದಿನ ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬೂಮ್ರಾ ಚುರುಕಿನ ಆಟದಿಂದ ಪುಟಿದೆದ್ದು ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್‌ಗೆ 272 ರನ್ ಗೆಲುವಿನ ಗುರಿ ನೀಡಿತ್ತು. ಗುರಿ ಬೆನ್ನ‌ತ್ತಿರುವ ಇಂಗ್ಲೆಂಡ್ ತಂಡವು ಆರಂಭಿಕ ಆಘಾತಕ್ಕೆ ಒಳಗಾಗಿದ್ದು, ಚಹಾ ವಿರಾಮದ ಬಳಿಕ ಆಟ ಆರಂಭಿಸಿ ಕೆಲವೇ ನಿಮಿಷಗಳಲ್ಲಿ 7 ವಿಕೆಟ್ ಕಳೆದುಕೊಂಡು 90 ರನ್‌ ಗಳಿಸಿದೆ. ಓದಿ: : ಇಂಗ್ಲೆಂಡ್‌ ಗೆಲುವಿಗೆ 272 ರನ್ ಗುರಿ ನೀಡಿದ ಭಾರತ ಭಾರತದ ಪರ ಮಿಂಚಿನ ಬೌಲಿಂಗ್ ದಾಳಿ ಸಂಘಟಿಸಿದ ಬೂಮ್ರಾ, ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಸಿರಾಜ್ತಲಾ 2 ವಿಕೆಟ್ ಕಬಳಿಸಿದ್ದಾರೆ. ಮೊಹಮ್ಮದ್ ಶಮಿ 1 ವಿಕೆಟ್ ಪಡೆದಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ದಾಖಲಿಸಿ ಇಂಗ್ಲೆಂಡ್ ಹೆಚ್ಚು ಮೊತ್ತ ಪೇರಿಸುವಲ್ಲಿ ಕಾರಣರಾಗಿದ್ದ ಜೋ ರೂಟ್ ಎರಡನೇ ಇನ್ನಿಂಗ್ಸ್‌ನಲ್ಲಿಯೂ ದೊಡ್ಡ ಮೊತ್ತ ದಾಖಲಿಸು ಸುಳಿವು ನೀಡಿದ್ದರು. ಆದರೆ ಅವರನ್ನು ಪೆವಿಲಿಯನ್‌ಗೆ ಕಳುಹಿಸಿರುವ ಬೂಮ್ರಾ ಭಾರತದ ಗೆಲುವಿನ ಆಸೆ ಮತ್ತೆ ಚಿಗುರುವಂತೆ ಮಾಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.