ಹಿಮಪಾತದ ನಡುವೆ ಐಸ್ ಕ್ರಿಕೆಟ್ | ಶ್ರೀನಗರದ ಮನಮೋಹಕ ದೃಶ್ಯ ಶ್ರೀನಗರ: ಸೂಪರ್ ಸೆವೆನ್ ಫೆಡರೇಶನ್ ಆಫ್ ಇಂಡಿಯಾದ ಮಾರ್ಗದರ್ಶನದಲ್ಲಿ ಜಮ್ಮು ಮತ್ತು ಕಾಶ್ಮೀರದ ಸೂಪರ್ ಸೆವೆನ್ ಕ್ರಿಕೆಟ್ ಅಸೋಸಿಯೇಷನ್ ಶ್ರೀನಗರದಲ್ಲಿ ಮೊದಲ ಬಾರಿಗೆ ಐಸ್-ಕ್ರಿಕೆಟ್ ಚಾಂಪಿಯನ್‌ಶಿಪ್ ಆಯೋಜಿಸಿತ್ತು. ಋತುವಿನಲ್ಲಿ ಕಾಶ್ಮೀರ ಕಣಿವೆಯಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಯುವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬಂದರು. ಭವಿಷ್ಯದಲ್ಲಿ ಅನೇಕ ಚಳಿಗಾಲದ ಆಟಗಳನ್ನು ಸಹ ಪರಿಚಯಿಸಲು ಉತ್ಸಾಹ ಬಂದಿದೆ ಎಂದು ಆಟಗಾರರು ಹೇಳುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.