2021: ಆರ್‌ಸಿಬಿ ಮತ್ತು ಮುಂಬೈ ಮಧ್ಯೆ ಇಂದು ಮೊದಲ ಪಂದ್ಯ ಬೆಂಗಳೂರು: ಆರ್‌ಸಿಬಿ.. ಪ್ರಸಕ್ತ ಸಾಲಿನ ಐಪಿಎಲ್ ಪಂದ್ಯಾವಳಿ ಏಪ್ರಿಲ್ 9, ಶುಕ್ರವಾರದಿಂದ ಆರಂಭವಾಗುತ್ತಿದೆ. ಮೊದಲ ಪಂದ್ಯ ಮುಂಬಯಿ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದ್ದು, ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣ ಸಜ್ಜಾಗಿದೆ. ಸಂಜೆ 7.30 ಆರಂಭವಾಗುವ ಪಂದ್ಯದಲ್ಲಿ, ಆರ್‌ಸಿಬಿ ತಂಡವನ್ನು ಮುಂಬೈ ಇಂಡಿಯನ್ಸ್ ಎದುರಿಸುತ್ತಿದೆ. ವಿರಾಟ್ ಕೊಹ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಿದ್ದು, ರೋಹಿತ್ ಶರ್ಮಾ ಮುಂಬೈ ತಂಡದ ನಾಯಕನಾಗಿದ್ದಾರೆ. ವಿರಾಟ್ ಕೊಹ್ಲಿ ಆರಂಭಿಕ ಆಟಗಾರನಾಗಿ ಆರ್‌ಸಿಬಿಯಿಂದ ಕಣಕ್ಕಿಳಿಯಲಿದ್ದಾರೆ. ಜತೆಗೆ ದೇವದತ್ತ ಪಡಿಕ್ಕಲ್, ಎ ಬಿ ಡಿವಿಲಿಯರ್ಸ್, ಯಜುವೇಂದ್ರ ಚಹಲ್ ಕೂಡ ಆರ್‌ಸಿಬಿ ಬೆಂಬಲಕ್ಕಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ರೋಹಿತ್ ಶರ್ಮಾ, ರಾಹುಲ್ ಚಹರ್, ಕೃಣಾಲ್ ಪಾಂಡ್ಯ ಕೂಡ ಇದ್ದಾರೆ. ಉಭಯ ತಂಡಗಳ ಬಲಾಬಲ ಒಟ್ಟು ಪಂದ್ಯ: 27 ಎಂಐ: 17 ಆರ್‌ಸಿಬಿ: 10 2021: ಕೊಹ್ಲಿ ಬಳಗಕ್ಕೆ ‘ಚಾಂಪಿಯನ್‌’ ರೋಹಿತ್ ಪಡೆ ಸವಾಲು ಕಳೆದ ಐದು ಪಂದ್ಯಗಳ ವಿವರ ಮುಂಬೈ ಇಂಡಿಯನ್ಸ್ ಐದು ಪಂದ್ಯಗಳ ಪೈಕಿ ಒಂದನ್ನು ಸೋತಿದ್ದು, ನಾಲ್ಕರಲ್ಲಿ ಗೆಲುವು ಸಾಧಿಸಿದೆ. ಆರ್‌ಸಿಬಿ ಸತತ ಐದು ಸೋಲು ಕಂಡಿದೆ. ಪಂದ್ಯ ಇಂದು ಸಂಜೆ 7.30ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್ ಮತ್ತು ಡಿಸ್ನಿ+ಹಾಟ್‌ಸ್ಟಾರ್ ಮೂಲಕ ಪಂದ್ಯ ವೀಕ್ಷಿಸಬಹುದು. ಆಳ–ಅಗಲ: ಕೋವಿಡ್‌ಗೆ ಕ್ರಿಕೆಟ್ ಸೆಡ್ಡು.. ಇಂದಿನಿಂದ ಚುಟುಕು ಕ್ರಿಕೆಟ್ ಹಬ್ಬ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.