ಆರ್‌ಸಿಬಿ ಮುಖ್ಯಸ್ಥರಾಗಿ ಪ್ರಥಮೇಶ್ ಮಿಶ್ರಾ ನೇಮಕ ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸ್‌ ಮುಖ್ಯಸ್ಥರಾಗಿ ಪ್ರಥಮೇಶ್ ಮಿಶ್ರಾ ನೇಮಕವಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿರುವ ಡಿಯಾಜಿಯೊ ಇಂಡಿಯಾದಲ್ಲಿ ಮುಖ್ಯ ವಾಣಿಜ್ಯಾಧಿಕಾರಿಯಾಗಿದ್ದ ಮಿಶ್ರಾ ಅವರಿಗೆ ಹೆಚ್ಚುವರಿಯಾಗಿ ಫ್ರಾಂಚೈಸಿ ಮುಖಸ್ಥರ ಹೊಣೆಯನ್ನೂ ನೀಡಲಾಗಿದೆ. ಆನಂದ್ ಕೃಪಾಳು ಅವರ ಅಧಿಕಾರವಧಿ ಮುಗಿದಿದ್ದು ಆ ಸ್ಥಾನಕ್ಕೆ ಮಿಶ್ರಾ ನೇಮಕವಾಗಿದ್ದಾರೆ. ‘ತಂಡದ ನಾಯಕ ವಿರಾಟ್ ಕೊಹ್ಲಿ, ಕೋಚ್ ಮೈಕ್ ಹೆಸನ್ ಮತ್ತು ಸೈಮನ್ ಕ್ಯಾಟಿಚ್ ಅವರೊಂದಿಗೆ ಕಾರ್ಯನಿರ್ವಹಿಸಲು ಉತ್ಸುಕನಾಗಿದ್ದೇನೆ. ಆನಂದ್ ಅವರು ಇದುವರೆಗೆ ಸಂಸ್ತೆಗೆ ಉತ್ತಮ ಕಾಣಿಕೆ ನೀಡಿದ್ದಾರೆ. ಅವರ ಮಾರ್ಗದರ್ಶನಕ್ಕೆ ಆಭಾರಿಯಾಗಿದ್ದೇನೆ‘ ಎಂದು ಮಿಶ್ರಾ ಹೇಳಿದ್ದಾರೆ. ಇದನ್ನೂ ಓದಿ... ಯೂರೊ ಕಪ್ ಫುಟ್‌ಬಾಲ್ ಟೂರ್ನಿ: ಸ್ಪೇನ್‌–ಸ್ವಿಟ್ಜರ್ಲೆಂಡ್‌ಗೆ ಸೆಮಿಫೈನಲ್‌ ಕನಸು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.