ಕ್ರಿಕೆಟ್: ಮತ್ತೆ ಅರ್ಧಶತಕ ಸಿಡಿಸಿದ ಜಡೇಜ ಲಂಡನ್‌: ಎಡಗೈ ಬ್ಯಾಟ್ಸ್‌ಮನ್‌ ರವೀಂದ್ರ ಜಡೇಜ ಮತ್ತೆ ಅರ್ಧಶತಕ ಸಿಡಿಸಿ ಮಿಂಚಿದರು. ಕೌಂಟಿ ಸಿಲೆಕ್ಟ್ ಇಲೆವನ್ ಎದುರಿನ ಭಾರತ ತಂಡದ ಮೂರು ದಿನಗಳ ಅಭ್ಯಾಸ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಚೆಸ್ಟರ್ ಲಿ ಸ್ಟ್ರೀಟ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಜಡೇಜ 75 ರನ್ ಗಳಿಸಿದ್ದರು. ಎರಡನೇ ಇನಿಂಗ್ಸ್‌ನಲ್ಲಿ 51 (77 ಎಸೆತ, 4 ಬೌಂಡರಿ, 1 ಸಿಕ್ಸರ್) ರನ್‌ ಗಳಿಸಿದ್ದಾಗ ಗಾಯಗೊಂಡು ನಿವೃತ್ತರಾದರು. ಭಾರತದ ಎರಡನೇ ಇನಿಂಗ್ಸ್‌ನಲ್ಲಿ ಚೇತೇಶ್ವರ ಪೂಜಾರ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಕ್ರೀಸ್‌ಗೆ ಇಳಿದರು. ಮಯಂಕ್ ಅಗರವಾಲ್ ಆಕರ್ಷಕ ಇನಿಂಗ್ಸ್ ಕಟ್ಟಿದರು. ಆದರೆ ಮೂರು ರನ್‌ಗಳಿಂದ ಅರ್ಧಶತಕ ತಪ್ಪಿಸಿಕೊಂಡರು. ಮೊದಲ ಇನಿಂಗ್ಸ್‌ನಲ್ಲಿ ಕೆ.ಎಲ್‌.ರಾಹುಲ್ ಶತಕ ಗಳಿಸಿದ್ದರು. ಸಂಕ್ಷಿಪ್ತ ಸ್ಕೋರು ಮೊದಲ ಇನಿಂಗ್ಸ್‌: ಭಾರತ: 93 ಓವರ್‌ಗಳಲ್ಲಿ 311 ಕೌಂಟಿ ಸೆಲೆಕ್ಟ್ ಇಲೆವನ್:82.3 ಓವರ್‌ಗಳಲ್ಲಿ 220 ಎರಡನೇ ಇನಿಂಗ್ಸ್‌: ಭಾರತ:55 ಓವರ್‌ಗಳಲ್ಲಿ 3ಕ್ಕೆ 192 ಡಿಕ್ಲೇರ್‌ (ಮಯಂಕ್ ಅಗರವಾಲ್ 47, ಚೇತೇಶ್ವರ್ ಪೂಜಾರ 38, ಹನುಮ ವಿಹಾರಿ 43, ರವೀಂದ್ರ ಜಡೇಜ ಗಾಯಗೊಂಡು ನಿವೃತ್ತಿ 51; ಜಾಕ್‌ ಕಾರ್ಲ್‌ಸನ್ 64ಕ್ಕೆ2) ಕೌಂಟಿ ಸೆಲೆಕ್ಟ್ ಇಲೆವನ್: 15.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 31 (ಜೇಕ್ ಲಿಬಿ 17, ಹಸೀಬ್ ಹಮೀದ್ 13). ಫಲಿತಾಂಶ: ಪಂದ್ಯ ಡ್ರಾ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.