| ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ ಜನವರಿ 5ರಿಂದ ನವದೆಹಲಿ (ಪಿಟಿಐ): ದೇಶಿ ಕ್ರಿಕೆಟ್‌ನ ‘ರಾಜ’ ರಣಜಿ ಟ್ರೋಫಿ ಟೂರ್ನಿಯು 2022ರ ಜನವರಿ 5ರಿಂದ ಮಾರ್ಚ್ 20ರವರೆಗೆ ಆಯೋಜನೆಗೊಳ್ಳಲಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಗುರುವಾರ ಈ ವಿಷಯವನ್ನು ಬಹಿರಂಗಪಡಿಸಿದೆ. ಜೀವ ಸುರಕ್ಷಾ ವಾತಾವರಣದಲ್ಲಿ ಈ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಒಟ್ಟು 38 ತಂಡಗಳು ಕಣಕ್ಕಿಳಿಯಲಿವೆ. 2021–22ರ ದೇಶಿ ಋತುವನ್ನು ಮುಂಬರುವ ಅಕ್ಟೋಬರ್‌ 27ರಿಂದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯೊಂದಿಗೆ ಆರಂಭಿಸಲಿದೆ. ಐಪಿಎಲ್ ಮುಗಿದ ನಂತರ ಈ ಟೂರ್ನಿ ನಡೆಯಲಿರುವುದರಿಂದ ಪ್ರಮುಖ ಆಟಗಾರರು ತಮ್ಮ ರಾಜ್ಯ ತಂಡಗಳಲ್ಲಿ ಆಡುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಡಿಸೆಂಬರ್ 1ರಿಂದ 29ರವರೆಗೆ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯು ನಡೆಯಲಿದೆ. ಮಹಿಳೆಯರ ರಾಷ್ಟ್ರೀಯ ಏಕದಿನ ಟೂರ್ನಿಯೂ ಅಕ್ಟೋಬರ್ 20ರಿಂದ ನವೆಂಬರ್ 20ವರೆಗೆ ನಡೆಯುವುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.