-2020: ಗಾಯಾಳು ಅಮಿತ್ ಮಿಶ್ರಾ ಸ್ಥಾನಕ್ಕೆ ಕರ್ನಾಟಕದ ಪ್ರವೀಣ್ ದುಬೆ ಶಾರ್ಜಾ: ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿರುವ ಅಮಿತ್‌ ಮಿಶ್ರಾ ಅವರ ಬದಲು ಕರ್ನಾಟಕದ ಲೆಗ್‌ಸ್ಪಿನ್ನರ್‌ ಪ್ರವೀಣ್‌ ದುಬೆಗೆ ಸ್ಥಾನ ನೀಡಲಾಗುವುದು ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಿಳಿಸಿದೆ. ‘ಅಮಿತ್‌ ಮಿಶ್ರಾ ಬದಲು ಡ್ರೀಮ್‌ ಇಲವೆನ್‌ ಐಪಿಎಲ್‌ನ ಮುಂದಿನ ಪಂದ್ಯಗಳಿಗೆ 27 ವರ್ಷದ ಪ್ರವೀಣ್‌ ದುಬೆತಂಡ ಸೇರಿಕೊಂಡಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ಸೋಮವಾರ ಪ್ರಕಟಿಸಿದೆ. ಕರ್ನಾಟಕಮೂಲದ ದುಬೆ, ದೇಶಿ ಕ್ರಿಕೆಟ್‌ನಲ್ಲಿ 14 ಟಿ20 ಪಂದ್ಯಗಳನ್ನು ಆಡಿದ್ದಾರೆ. 6.87 ಸರಾಸರಿಯಲ್ಲಿ ರನ್‌ ನೀಡಿ 16 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ’ ಎಂದು ಫ್ರಾಂಚೈಸ್‌ ಅಧಿಕೃತ ಪ್ರಕಟಣೆ ಹೊರಡಿಸಿದೆ. ‘ಅಕ್ಟೋಬರ್‌ 3ರಂದು ಶಾರ್ಜಾದಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್ ವಿರುದ್ಧ ನಡೆದ ಪಂದ್ಯದ ವೇಳೆ ಅಮಿತ್‌ ಮಿಶ್ರಾ ಉಂಗುರ ಬೆರಳಿಗೆಗಾಯವಾಗಿತ್ತು. ಸದ್ಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ’ ಎಂದೂ ತಿಳಿಸಿದೆ. 2016ರ ಐಪಿಎಲ್‌ ಹರಾಜಿನಲ್ಲಿ ದುಬೆ ₹ 35 ಲಕ್ಷಕ್ಕೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪಾಲಾಗಿದ್ದರು. ಸದ್ಯ ಟೂರ್ನಿಯಲ್ಲಿ 9 ಪಂದ್ಯಗಳನ್ನು ಆಡಿರುವ ಡೆಲ್ಲಿ ಕ್ಯಾಪಿಟಲ್ಸ್ 7 ಜಯ ಸಾಧಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಲೀಗ್ ಹಂತದಲ್ಲಿ ಇನ್ನೂ 5 ಪಂದ್ಯಗಳು ಬಾಕಿ ಇರುವುದರಿಂದ ಪ್ಲೇ ಆಫ್‌ಗೇರಲು ತುದಿಗಾಲಲ್ಲಿ ನಿಂತಿದೆ. 📣 📣 @' , ' - #Dream11IPL . : ://./NlvToC9FkX# ../Nwr4KLFn7H ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.