: ಲಾರ್ಡ್ಸ್‌ನಲ್ಲಿ ಸ್ಮರಣೀಯ ಶತಕ, ವೀರು ದಾಖಲೆ ಸರಿಗಟ್ಟಿದ ರಾಹುಲ್ ಲಾರ್ಡ್ಸ್: ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಶತಕ ಗಳಿಸಿರುವ ಕನ್ನಡಿಗ ಕೆ.ಎಲ್. ರಾಹುಲ್, ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಏಷ್ಯಾದ ಹೊರಗಡೆ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳ ಪೈಕಿ ವೀರು ದಾಖಲೆಯನ್ನು ರಾಹುಲ್ ಸರಿಗಟ್ಟಿದ್ದಾರೆ. ಇದನ್ನೂ ಓದಿ:ಟೆಸ್ಟ್‌ | ರಾಹುಲ್ ಶತಕ ವೈಭವ: ಮೊದಲ ದಿನ ಭಾರತ 3ಕ್ಕೆ 276 ರಾಹುಲ್ ಹಾಗೂ ಸೆಹ್ವಾಗ್ ತಲಾ ನಾಲ್ಕು ಶತಕಗಳನ್ನು ಹೊಂದಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮಾಜಿ ದಿಗ್ಗಜ ಸುನಿಲ್ ಗವಾಸ್ಕರ್ ಒಟ್ಟು 15 ಶತಕಗಳನ್ನು ಗಳಿಸಿದ್ದರು. ! 👏 ⌛️# | # | @klrahul11 ://./NB5N81OjT1 ಕಳೆದ ಮೂರು ವರ್ಷಗಳಲ್ಲಿ ವಿದೇಶ ನೆಲದಲ್ಲಿ ಶತಕ ಬಾರಿಸಿದ ಭಾರತದ ಆರಂಭಿಕ ಎಂಬ ಗೌರವಕ್ಕೂ ರಾಹುಲ್ ಭಾಜನರಾಗಿದ್ದಾರೆ. ಇಲ್ಲಿ ಗಮನಾರ್ಹ ಅಂಶವೆಂದರೆ ರಾಹುಲ್ ಅವರಿಂದಲೇ ಕೊನೆಯ ಶತಕ ದಾಖಲಾಗಿತ್ತು. 2018ರ ಓವಲ್ ಟೆಸ್ಟ್ ಪಂದ್ಯದಲ್ಲಿ ರಾಹುಲ್ ಸೆಂಚುರಿ ಬಾರಿಸಿದ್ದರು. ಒಟ್ಟಾರೆಯಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ರಾಹುಲ್ ಬ್ಯಾಟ್‌ನಿಂದ ಸಿಡಿದ ಆರನೇ ಶತಕ ಇದಾಗಿದೆ. ಈ ಪೈಕಿ ಮೂರು ಶತಕಗಳು ಇಂಗ್ಲೆಂಡ್ ವಿರುದ್ಧವೇ ದಾಖಲಾಗಿವೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಮಿಸ್ ಮಾಡಿಕೊಂಡಿದ್ದ ರಾಹುಲ್ ಈ ಬಾರಿ ಮತ್ತಷ್ಟು ಸೊಗಸಾದ ಇನ್ನಿಂಗ್ಸ್ ಕಟ್ಟಿದರು. 248 ಎಸೆತಗಳನ್ನು ಎದುರಿಸಿದ ರಾಹುಲ್ 12 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 127 ರನ್ ಗಳಿಸಿ ಅಜೇಯರಾಗುಳಿದರು. 📸📸@klrahul11 # ://./OvD0ascaGV ../st3dRt2p3I ಮೊದಲ ವಿಕೆಟ್‌ಗೆ ರೋಹಿತ್ ಶರ್ಮಾ (83) ಜೊತೆಗೆ 126 ರನ್‌ಗಳ ಜೊತೆಯಾಟ ನೀಡಿದರು. 2011ರ ಬಳಿಕ ಏಷ್ಯಾ ಹೊರಗಡೆ ಭಾರತದ ಆರಂಭಿಕ ಜೋಡಿಯಿಂದ ದಾಖಲಾದ ಮೊದಲ ಶತಕದ ಜೊತೆಯಾಟವು ಇದಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.