ಚಿನ್ನಸ್ವಾಮಿ ಕ್ರೀಡಾಂಗಣ | ಕೆಎಸ್‌ಸಿಎ ಟಿ20: ವಲ್ಚರ್ಸ್‌ ಕ್ರಿಕೆಟ್ ಕ್ಲಬ್‌ಗೆ ಜಯ ಬೆಂಗಳೂರು: ಸುಮಾರು ಒಂಬತ್ತು ತಿಂಗಳ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಮತ್ತೆ ಕ್ರಿಕೆಟ್ ಅರಳಿತು. ಕೊರೊನಾ ವೈರಸ್‌ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಕ್ರಿಕೆಟ್ ಚಟುವಟಿಕೆಗಳು ಸ್ಥಗಿತವಾಗಿದ್ದವು. ಅಗ ನಡೆಯದಿದ್ದ ಕೆಎಸ್‌ಸಿಎ ಟ್ವೆಂಟಿ–20 ಟೂರ್ನಿಯ ಫೈನಲ್ ಪಂದ್ಯವನ್ನು ೀಗ ನಡೆಸಲಾಯಿತು. ವಲ್ಚರ್ಸ್‌ ಕ್ರಿಕೆಟ್ ಕ್ಲಬ್ ತಂಡವು 9 ರನ್‌ಗಳಿಂದ ಸ್ವಸ್ತಿಕ್ ಯೂನಿಯನ್ ವಿರುದ್ಧ ಜಯಿಸಿತು. ಯುಎಇಯಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡಿದ್ದ ಕರುಣ್ ನಾಯರ್, ಕೃಷ್ಣಪ್ಪ ಗೌತಮ್ ಅವರ ಅಬ್ಬರದ ಬ್ಯಾಟಿಂಗ್ ನೋಡುವ ಅವಕಾಶ ಲಭಿಸಿತು. ಮೈದಾನದ ಗ್ಯಾಲರಿಯಲ್ಲಿ ಕೆಲವು ಪ್ರೇಕ್ಷಕರು ಸೇರಿದ್ದರು. ಮಾಸ್ಕ್ ಧರಿಸಿಕೊಂಡು ಕುಳಿತು ಪಂದ್ಯ ವೀಕ್ಷಿಸಿದರು. ಕರುಣ್ ಅರ್ಧಶತಕದ ಬಲದಿಂದ ವಲ್ಚರ್ಸ್‌ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 186 ರನ್ ಗಳಿಸಿತು. ಮಳೆ ಬಂದ ಕಾರಣ ಕೆಲಕಾಲ ಆಟ ಸ್ಥಗಿತವಾಗಿತ್ತು. ಆದ್ದರಿಂದಾಗಿ ಸ್ವಸ್ತಿಕ್ ಯೂನಿಯನ್ ತಂಡಕ್ಕೆ 19 ಓವರ್‌ಗಳಲ್ಲಿ 179 ರನ್‌ಗಳ ಗೆಲುವಿನ ಗುರಿ ನೀಡಲಾಯಿತು. ಕೃಷ್ಣಪ್ಪ ಗೌತಮ್ (83 ರನ್) ಅವರ ಅಬ್ಬರದ ಬ್ಯಾಟಿಂಗ್ ಗಮನ ಸೆಳೆಯಿತು. ಆದರೆ, ತಂಡವು ಗೆಲುವಿನ ದಡಸೇರಲಿಲ್ಲ. ಸಂಕ್ಷಿಪ್ತ ಸ್ಕೋರ್: ವಲ್ಚರ್ಸ್ ಕ್ರಿಕೆಟ್ ಕ್ಲಬ್: 20 ಓವರ್‌ಗಳಲ್ಲಿ 7ಕ್ಕೆ186 (ಕರುಣ್ ನಾಯರ್ 53, ಕೆ.ಎಲ್. ಶ್ರೀಜಿತ್ 54, ಅನಿರುದ್ಧ ಜೋಶಿ 41, ಎಂ.ಜಿ. ನವೀನ್ 26ಕ್ಕೆ2, ಕೆ. ಗೌತಮ್ 34ಕ್ಕೆ3), ಸ್ವಸ್ತಿಕ್ ಸಿಸಿ: 18.5 ಓವರ್‌ಗಳಲ್ಲಿ 169 (ಕೆ. ಗೌತಮ್ 83, ಎಂ.ಬಿ. ದರ್ಶನ್ 28ಕ್ಕೆ5) ಮಳೆಯಿಂದಾಗಿ ಕೆಲಕಾಲ ಪಂದ್ಯ ಸ್ಥಗಿತವಾಗಿತ್ತು. ಆದ್ದರಿಂದ ಗೆಲುವಿನ ಗುರಿಯನ್ನು 19 ಓವರ್‌ಗಳಲ್ಲಿ 179 ರನ್‌ಗಳಿಗೆ ನಿಗದಿಪಡಿಸಲಾಗಿತ್ತು. ಫಲಿತಾಂಶ: ವಲ್ಷರ್ಸ್ ಸಿಸಿಗೆ 9 ರನ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.