ಟಿ20: ವೇಗದ ಶತಕ ಬಾರಿಸಿದ ಗ್ಲೆನ್ ಫಿಲಿಫ್ಸ್; ನ್ಯೂಜಿಲೆಂಡ್‌ಗೆ 72 ರನ್ ಗೆಲುವು ಆಕ್ಲೆಂಡ್: ಮೌಂಟ್ ಮೌಗಾನುಯ್‌ನಲ್ಲಿರುವ ಬೇ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಸರಣಿಯ 2ನೇ ಪಂದ್ಯದಲ್ಲಿ ನ್ಯೂಜಿಲೆಂಡ್‌, ವೆಸ್ಟ್ ಇಂಡೀಸ್‌ ತಂಡವನ್ನು72 ರನ್‌ಗಳಿಂದ ಪರಾಭವಗೊಳಿಸಿದೆ. ನ್ಯೂಜಿಲೆಂಡ್‌ನ ಗ್ಲೆನ್ ಫಿಲಿಫ್ಸ್ 46 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದ್ದಾರೆ. ಫಿಲಿಫ್ಸ್ ಅವರ ಈ ಶತಕವು ವಿಶ್ವದ ವೇಗದ ಶತಕಗಳಲ್ಲೊಂದಾಗಿದೆ, ಫಿಲಿಪ್ಸ್ 51 ಎಸೆತಗಳಲ್ಲಿ 108 ರನ್ ದಾಖಲಿಸಿದ್ದು ಇದರಲ್ಲಿ 8 ಸಿಕ್ಸರ್ ಮತ್ತು 10 ಬೌಂಡರಿಗಳು ಸೇರಿವೆ. ಟಾಸ್ ಗೆದ್ದು ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು, ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 238 ರನ್ ದಾಖಲಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ವೆಸ್ಟ್ ಇಂಡೀಸ್ ತಂಡಕ್ಕೆ ನಿಗದಿತ ಓವರ್‌ನಲ್ಲಿ 9 ವಿಕೆಟ್ ಕಳೆದುಕೊಂಡು 166 ರನ್ ದಾಖಲಿಸಲಷ್ಟೇ ಸಾಧ್ಯವಾಯಿತು. ' T20I 🔥 👏 # T20I! ../v4RLSfP4B6 ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌: 3 ವಿಕೆಟ್ ನಷ್ಟಕ್ಕೆ 238 ರನ್‌ಗಳು ಗ್ಲೆನ್ ಫಿಲಿಫ್ಸ್: 108 ರನ್‌ (51) ಕಾನ್ವೇ: 65 ರನ್‌ (37) ಗಪ್ಟಿಲ್‌: 34 ರನ್ (23) ವೆಸ್ಟ್‌ ಇಂಡೀಸ್: 9 ವಿಕೆಟ್ ನಷ್ಟಕ್ಕೆ 166 ರನ್‌ಗಳು ಕಿರನ್‌ ಪೊಲಾರ್ಡ್‌: 28 ರನ್‌ (15) ಕೀಮೊ ಪೌಲ್‌: 26 ರನ್ (18) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.