ಹೊಂಗಸಂದ್ರ ಮಡಿಲಿಗೆ ಸತೀಶ್ ರೆಡ್ಡಿ ಕಪ್ ಬೆಂಗಳೂರು: ಈ ಬಾರಿಯ ಸತೀಶ್ ರೆಡ್ಡಿ ಕಪ್ ಟೆನಿಸ್ ಬಾಲ್ ಕ್ರಿಕೆಟ್ ಟ್ರೋಫಿಯನ್ನು ಹೊಂಗಸಂದ್ರ ತಂಡವು ಗೆದ್ದುಕೊಂಡಿದೆ. ನಗರದ ಇಸ್ಲಾಮಿಯಾ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಹೊಂಗಸಂದ್ರ ತಂಡವು 15 ರನ್‌ಗಳಿಂದ ಹುಳಿಮಾವು ಎಂಎಸ್ಆರ್ ತಂಡದ ವಿರುದ್ಧ ಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹೊಂಗಸಂದ್ರ ತಂಡವು ನಿಗದಿತ 8 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 53 ರನ್ಗಳಿಸಿತು. ಇದಕ್ಕುತ್ತರವಾಗಿ ಹುಳಿಮಾವು ಎಂಎಸ್ಆರ್ ತಂಡವು 8 ಓವರ್‌ಗಳಲ್ಲಿ 38 ರನ್ ಗಳಿಸಿ ಸೋಲೊಪ್ಪಿಕೊಂಡಿತು.ವಿಜೇತ ತಂಡವು ಟ್ರೋಫಿ ಮತ್ತು ₹ 1 ಲಕ್ಷ ನಗದು ಪಡೆಯಿತು. ರನ್ನರ್ ಅಪ್ ತಂಡವು ಟ್ರೋಫಿ ಹಾಗೂ ₹ 50 ಸಾವಿರ ನಗದು ಪುರಸ್ಕಾರ ಪಡೆಯಿತು. ಹೊಂಗಸಂದ್ರ ತಂಡದ ಮಹೇಂದ್ರ ಪಂದ್ಯಶ್ರೇಷ್ಠ ಪ್ರಶಸ್ತಿ ಹಾಗು ಹುಳಿಮಾವು ತಂಡದಶಾನ್ ಸರಣಿ ಶ್ರೇಷ್ಠ ಪ್ರಶಸ್ತಿ ಗಳಿಸಿದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾಸಕ ಸತೀಶ್ ರೆಡ್ಡಿ, ಸಂಸದ ತೇಜಸ್ವಿ ಸೂರ್ಯ, ಮಾಜಿ ಪಾಲಿಕೆ ಸದಸ್ಯೆ ಭಾಗ್ಯಲಕ್ಷ್ಮಿಮುರಳಿ, ಬಿಜೆಪಿ ಮುಖಂಡ ಮುರಳೀಧರ್, ಮಾಜಿ ಮೇಯರ್ ನಟರಾಜ್ ಹಾಜರಿದ್ದರು. ಪಂದ್ಯದ ಬಳಿಕ ರಕ್ತದಾನ ಶಿಬಿರವೂ ನಡೆಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.