ಕ್ರಿಕೆಟ್‌: ರೋಹನ್‌ ಕದಂ ಶತಕ ಬೆಂಗಳೂರು: ರೋಹನ್‌ ಕದಂ ಅವರ ಶತಕದ (104, 121 ಎಸೆತ) ಬಲದಿಂದ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ (1) (ಬಿಯುಸಿಸಿ) ತಂಡವು ವೈ.ಎಸ್‌.ರಾಮಸ್ವಾಮಿ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ಕ್ವಾರ್ಟರ್‌ಫೈನಲ್‌ ತಲುಪಿತು. ಸೂಪರ್ ಲೀಗ್ ಪಂದ್ಯದಲ್ಲಿ ಆ ತಂಡವು 108 ರನ್‌ಗಳಿಂದ ಬೆಂಗಳೂರು ಆಕೇಷನಲ್ಸ್ ತಂಡವನ್ನು ಸೋಲಿಸಿತು. ಸ್ವಸ್ತಿಕ್‌ ಯೂನಿಯನ್‌ ಸಿಸಿ (1), ಬಿಯುಸಿಸಿ, ರಾಜಾಜಿನಗರ ಕ್ರಿಕೆಟರ್ಸ್,ವಲ್ಚರ್ಸ್‌ ಸಿಸಿ, ಜವಾಹರ್ ಸ್ಪೋರ್ಟ್ಸ್ ಕ್ಲಬ್‌ (1), ಮೌಂಟ್ ಜಾಯ್ ಸಿಸಿ, ಸರ್‌ ಸಯ್ಯದ್ ಕ್ರಿಕೆಟರ್ಸ್, ಸೋಷಿಯಲ್‌ ಕ್ರಿಕೆಟರ್ಸ್‌ ತಂಡಗಳು ಕ್ವಾರ್ಟರ್‌ಫೈನಲ್‌ ತಲುಪಿದವು. ಸಂಕ್ಷಿಪ್ತ ಸ್ಕೋರ್‌: ಬೆಂಗಳೂರು ಯುನೈಟೆಡ್‌ ಕ್ರಿಕೆಟ್ ಕ್ಲಬ್ (1): 50 ಓವರ್‌ಗಳಲ್ಲಿ 7ಕ್ಕೆ 251 (ರೋಹನ್ ಕದಂ 104, ಲಿಯಾನ್ ಖಾನ್‌ 69, ತುಷಾರ್ ಸಿಂಗ್ 38; ಪ್ರಜ್ವಲ್‌ 45ಕ್ಕೆ 2, ಅಜರುದ್ದೀನ್‌ ಬ್ಲಾಚ್‌ 39ಕ್ಕೆ 2). ಬೆಂಗಳೂರು ಆಕೇಷನಲ್ಸ್: 42. 5 ಓವರ್‌ಗಳಲ್ಲಿ 143 ಆಲೌಟ್‌ (ನಿತಿನ್‌ ಎಸ್‌. 26, ಶ್ರೀಹರಿ 54; ಆದಿತ್ಯ ಗೋಯಲ್‌ 8ಕ್ಕೆ 2, ತುಷಾರ್‌ ಹರಿಕೃಷ್ಣ 41ಕ್ಕೆ 2, ಸಮರ್ಥ ಶ್ರೀನಿವಾಸ್‌ 9ಕ್ಕೆ3). ಫಲಿತಾಂಶ: ಬೆಂಗಳೂರು ಯುನೈಟೆಡ್‌ ಕ್ರಿಕೆಟ್ ಕ್ಲಬ್‌ಗೆ 108 ರನ್‌ಗಳ ಜಯ. ಸರ್‌ ಸಯ್ಯದ್ ಕ್ರಿಕೆಟರ್ಸ್: 50 ಓವರ್‌ಗಳಲ್ಲಿ 9ಕ್ಕೆ 214 (ಲವನೀತ್‌ ಸಿಸೋಡಿಯಾ 65, ಕ್ರಾಂತಿ ಕುಮಾರ್ 39; ನವೀನ್ ಎಂ.ಜಿ 41ಕ್ಕೆ 2, ಶ್ರೇಯಸ್ ಗೋಪಾಲ್ 32ಕ್ಕೆ 4). ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ (1): 49.5 ಓವರ್‌ಗಳಲ್ಲಿ 183 ಆಲೌಟ್‌ (ಸಮರ್ಥ್‌ ಆರ್‌. 32, ಸಿದ್ಧಾರ್ಥ್‌ 66; ವಿದ್ವತ್‌ 29ಕ್ಕೆ 2, ಎಂ.ಎಸ್‌.ಭಾಂಡಗೆ 24ಕ್ಕೆ 2, ಕ್ರಾಂತಿ ಕುಮಾರ್‌ 13ಕ್ಕೆ 2, ಕುಶಾಲ್‌ ಮಹೇಶ್ ವಾಧ್ವಾನಿ 39ಕ್ಕೆ 2). ಫಲಿತಾಂಶ: ಸರ್‌ ಸಯ್ಯದ್‌ ಕ್ರಿಕೆಟರ್ಸ್‌ಗೆ 31 ರನ್‌ಗಳ ಗೆಲುವು. ಜವಾನ್ಸ್ ಕ್ರಿಕೆಟ್‌ ಕ್ಲಬ್‌: 48.5 ಓವರ್‌ಗಳಲ್ಲಿ 211 ಆಲೌಟ್‌ (ನಿಶಿತ್‌ ರಾಜ್‌ 104, ಮಿಲಿಂದ್‌ ರಮೇಶ್‌ 54; ರಾಜ್‌ ಅತುಲ್ ಗಾಲ 41ಕ್ಕೆ 5, ಪ್ರತೀಕ್ ಜೈನ್‌ 16ಕ್ಕೆ 2). ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್‌ (2): 38.4 ಓವರ್‌ಗಳಲ್ಲಿ 5ಕ್ಕೆ 212 (ಸುಜಯ್‌ ಎಸ್‌.ಎಸ್‌. ಔಟಾಗದೆ 105, ನಾಗ ಭರತ್ 37, ಕಾರ್ತಿಕ್‌ ಸಿ.ಎ. ಔಟಾಗದೆ 38; ಅಪ್ಪಣ್ಣ 22ಕ್ಕೆ 3). ಫಲಿತಾಂಶ: ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್‌ಗೆ(2) 5 ವಿಕೆಟ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.