ರಾಮಸ್ವಾಮಿ ಸ್ಮಾರಕ ಕ್ರಿಕೆಟ್: ಸೋಷಿಯಲ್, ಕೇಂಬ್ರಿಜ್ ತಂಡಗಳಿಗೆ ಭರ್ಜರಿ ಜಯ ಬೆಂಗಳೂರು: ಸೋಷಿಯಲ್ ಕ್ರಿಕೆಟರ್ಸ್ ಮತ್ತು ಕೇಂಬ್ರಿಜ್ ಕ್ರಿಕೆಟ್ ಕ್ಲಬ್ ತಂಡಗಳು ಕೆಎಸ್‌ಸಿಎ ಆಶ್ರಯದಲ್ಲಿ ನಡೆಯುತ್ತಿರುವ ವೈ.ಎಸ್‌.ರಾಮಸ್ವಾಮಿ ಸ್ಮಾರಕ ಕ್ರಿಕೆಟ್ ಟೂರ್ನಿಯ ಸೂಪರ್ ಲೀಗ್ ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿದವು. ಮಂಗಳವಾರ ನಡೆದ ಪಂದ್ಯದಲ್ಲಿ ಕೇಂಬ್ರಿಜ್ ತಂಡ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ ವಿರುದ್ಧ ಎಂಟು ವಿಕೆಟ್‌ಗಳಿಂದ ಜಯ ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಸೋಷಿಯಲ್ ಕ್ರಿಕೆಟರ್ಸ್ 115 ರನ್‌ಗಳಿಂದ ಬೆಂಗಳೂರು ಅಕೇಷನಲ್ಸ್‌ ವಿರುದ್ಧ ಗೆಲುವು ಸಾಧಿಸಿತು. ಸಂಕ್ಷಿಪ್ತ ಸ್ಕೋರು: ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್‌: 20 ಓವರ್‌ಗಳಲ್ಲಿ 7ಕ್ಕೆ 147 (ರೋಹನ್ ಕದಂ 53, ತುಷಾರ್ ಸಿಂಗ್ 33; ಸಂಕಲ್ಪ್ ಶೈಲೇಂದ್ರ 15ಕ್ಕೆ2, ಅಧೋಕ್ಷ್ 31ಕ್ಕೆ3); ಕೇಂಬ್ರಿಜ್ ಕ್ರಿಕೆಟ್ ಕ್ಲಬ್: 17.1 ಓವರ್‌ಗಳಲ್ಲಿ 2ಕ್ಕೆ 148 (ಮೊಹಮ್ಮದ್ ತಾಹ 31, ಮೊಹಮ್ಮದ್ ಜಾವೇದ್ 25, ಅಭಿನವ್ ಮನೋಹರ್ ಔಟಾಗದೆ 41, ಶುಭಾಂಗ್ ಹೆಗ್ಡೆ ಔಟಾಗದೆ 43). ಫಲಿತಾಂಶ: ಕೇಂಬ್ರಿಜ್ ತಂಡಕ್ಕೆ 8 ವಿಕೆಟ್‌ಗಳ ಜಯ (ಮಳೆಯಿಂದ ಪಂದ್ಯ ತಡವಾಗಿ ಆರಂಭ, 20 ಓವರ್‌ಗಳಿಗೆ ಸೀಮಿತ). ಸೋಷಿಯಲ್ ಕ್ರಿಕೆಟರ್ಸ್‌: 31 ಓವರ್‌ಗಳಲ್ಲಿ 9ಕ್ಕೆ 212 (ಅಕ್ಷಯ್ ಬಲ್ಲಾಳ್ 30, ಅಜಿತೇಶ್ 45, ಅವಿನಾಶ್ 32; ಅಜರುದ್ದೀನ್ 37ಕ್ಕೆ2, ಅಬುಲ್ ಹಸನ್ ಖಲೀದ್ 45ಕ್ಕೆ4); ಬೆಂಗಳೂರು ಅಕೇಷನಲ್ಸ್‌: 21.3 ಓವರ್‌ಗಳಲ್ಲಿ 97 (ರಿತೇಶ್ ಭಟ್ಕಳ 38ಕ್ಕೆ3, ಪೃಥ್ವಿರಾಜ್ 24ಕ್ಕೆ4). ಫಲಿತಾಂಶ: ಸೋಷಿಯಲ್ ಕ್ರಿಕೆಟರ್ಸ್‌ಗೆ 115 ರನ್‌ಗಳ ಗೆಲುವು. ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್: 48 ಓವರ್‌ಗಳಲ್ಲಿ 7ಕ್ಕೆ 261 (ಶ್ರೇಯಸ್ ಗೋಪಾಲ್ 49, ರಕ್ಷಿತ್ 39, ರೋಹಿತ್ ಸಬರವಾಲ್ 59; ಹೃದ್ಧಿಮಾನ್ ಬಸು 34ಕ್ಕೆ3, ಅಪ್ಪಣ್ಣ 52ಕ್ಕೆ2); ಜವಾನ್ಸ್ ಕ್ರಿಕೆಟ್ ಕ್ಲಬ್‌: 46.5 ಓವರ್‌ಗಳಲ್ಲಿ 180 (ನಿಶಿತ್ ರಾಜ್ 42, ಮಿಲಿಂದ್ ರಮೇಶ್ 85; ದೇವಯ್ಯ 31ಕ್ಕೆ2, ಆನಂದ ದೊಡ್ಡಮನಿ 28ಕ್ಕೆ3, ಅಕ್ಷಯ್ ಚೆನ್ನಿಗ 37ಕ್ಕೆ3). ಫಲಿತಾಂಶ:ಸ್ವಸ್ತಿಕ್ ಯೂನಿಯನ್‌ಗೆ 81 ರನ್‌ಗಳ ಜಯ (ಆರಂಭದಲ್ಲಿ ಮಳೆ ಅಡ್ಡಿ, 48 ಓವರ್‌ಗಳಿಗೆ ಪಂದ್ಯ ಸೀಮಿತ). ಸರ್ ಸೈಯದ್ ಕ್ರಿಕೆಟರ್ಸ್: 48 ಓವರ್‌ಗಳಲ್ಲಿ 7ಕ್ಕೆ 189 (ಮೋಹಿತ್ 41, ತನಯ್ 39; ಪ್ರತೀಕ್ ಜೈನ್ 32ಕ್ಕೆ2, ಕಾರ್ತಿಕ್ 26ಕ್ಕೆ2); ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್‌ (2): 23 ಓವರ್‌ಗಳಲ್ಲಿ 103 (ಸೂರಜ್ ಕಾಮತ್ 37ಕ್ಕೆ4, ಶುಭಂ ಭಾಂಡಗೆ 23ಕ್ಕೆ5). ಫಲಿತಾಂಶ: ಸರ್ ಸೈಯದ್ ಕ್ರಿಕೆಟರ್ಸ್‌ಗೆ 86 ರನ್‌ಗಳ ಗೆಲುವು (ಪಂದ್ಯದ ಆರಂಭಕ್ಕೆ ಮಳೆ ಅಡ್ಡಿ; 48 ಓವರ್‌ಗಳಿಗೆ ಸೀಮಿತ). ಮಾಡರ್ನ್ ಕ್ರಿಕೆಟ್ ಕ್ಲಬ್: 45.2 ಓವರ್‌ಗಳಲ್ಲಿ 144 (ಚಿನ್ಮಯ್ 40, ಆಯುಷ್‌ ಕುಮಾರ್ 38; ವಿದ್ಯಾಧರ್ ಪಾಟೀಲ್ 11ಕ್ಕೆ2, ತನಿಶ್ ಮಹೇಶ್ 22ಕ್ಕೆ2, ತಿಪ್ಪಾ ರೆಡ್ಡಿ 22ಕ್ಕೆ3); ವಿಜಯ ಕ್ರಿಕೆಟ್ ಕ್ಲಬ್: 37.5 ಓವರ್‌ಗಳಲ್ಲಿ 112 (ಶಾನ್ ಜೋಸೆಫ್ 42; ಪ್ರಣವ್ 9ಕ್ಕೆ3, ಅಶ್ವಿನ್ ಕುಮಾರ್ 28ಕ್ಕೆ2, ಅಮರ್ ಮಹಾವೀರ್ 19ಕ್ಕೆ2, ಆಯುಷ್ ಕುಮಾರ್ 26ಕ್ಕೆ3). ಫಲಿತಾಂಶ: ಮಾಡರ್ನ್ ಕ್ರಿಕೆಟ್ ಕ್ಲಬ್‌ಗೆ 32 ರನ್‌ಗಳ ಜಯ. ಜವಾಹರ್ ಸ್ಪೋರ್ಟ್ಸ್ ಕ್ಲಬ್‌ (1): 50 ಓವರ್‌ಗಳಲ್ಲಿ 8ಕ್ಕೆ 275 (ಚೇತನ್ 59, ರಾಜ್ ಕುಮಾರ್ 102, ರಿಷಿ ಭನ್ಸಾಲಿ 35, ಹಿಮಾದ್ರಿ 36; ಹೊಯ್ಸಳ 41ಕ್ಕೆ2, ಶಮಂತ್ 36ಕ್ಕೆ2); ರಾಜಾಜಿನಗರ ಕ್ರಿಕೆಟರ್ಸ್‌: 38.5 ಓವರ್‌ಗಳಲ್ಲಿ 188 (ಜಯೇಶ್ ಬಾಬು 49; ತಾಹಾ ಖಾನ್ 51ಕ್ಕೆ4, ಶ್ರೀಕರ್ 41ಕ್ಕೆ4). ಫಲಿತಾಂಶ: ಜವಾಹರ್ ಸ್ಪೋರ್ಟ್ಸ್ ಕ್ಲಬ್‌ಗೆ 87 ರನ್‌ಗಳ ಗೆಲುವು. ಮೌಂಟ್ ಜಾಯ್ ಕ್ರಿಕೆಟ್ ಕ್ಲಬ್: 49 ಓವರ್‌ಗಳಲ್ಲಿ 7ಕ್ಕೆ 211 (ಶರತ್ ಬೇಳೂರು 31, ಆಯುಷ್ ಶೆಟ್ಟಿ ಔಟಾಗದೆ 54, ಅಜಯ್ ಕೃಷ್ಣ ಔಟಾಗದೆ 39; ಜೆ.ಸುಚಿತ್ 44ಕ್ಕೆ2); ವಲ್ಚರ್ಸ್ ಕ್ರಿಕೆಟ್ ಕ್ಲಬ್: 38 ಓವರ್‌ಗಳಲ್ಲಿ ಕ್ಕೆ 199 (ಕರುಣ್ ನಾಯರ್ 26, ನಿತಿನ್ ಭಿಲ್ಲೆ 30, ಅನಿರುದ್ಧ ಜೋಶಿ ಔಟಾಗದೆ 75; ಶರಣ್ ಗೌಡ 23ಕ್ಕೆ3). ಫಲಿತಾಂಶ: ವಲ್ಚರ್ಸ್ ಕ್ರಿಕೆಟ್ ಕ್ಲಬ್‌ಗೆ 4 ವಿಕೆಟ್‌ಗಳ ಜಯ (ಮಳೆಯಿಂದಾಗಿ ತಡವಾಗಿ ಆರಂಭ; ಗುರಿ 199 ರನ್‌ಗಳಿಗೆ ಪರಿಷ್ಕರಣೆ). ವಿಜಯ ಕ್ರಿಕೆಟ್ ಕ್ಲಬ್ (ಮಾಲೂರು): 43.2 ಓವರ್‌ಗಳಲ್ಲಿ 177 (ಧ್ರುವ 35, ಬಾಲು ದಿಲೀಪ್ 48; ಯಶ್ ಶಾನಭಾಗ್ 45ಕ್ಕೆ4, ಅನಿಲ್ 23ಕ್ಕೆ2). ಫ್ರೆಂಡ್ಸ್ ಯೂನಿಯನ್ ಕ್ರಿಕೆಟ್ ಕ್ಲಬ್‌: 28.2 ಓವರ್‌ಗಳಲ್ಲಿ 4ಕ್ಕೆ 178 (ಲೋಚನ್ ಗೌಡ 83, ವಿನಯ್ ಸಾಗರ್ ಔಟಾಗದೆ 45; ಅರ್ಣವ್ 36ಕ್ಕೆ2). ಫಲಿತಾಂಶ: ಫ್ರೆಂಡ್ಸ್ ಯೂನಿಯನ್ ಕ್ರಿಕೆಟ್ ಕ್ಲಬ್‌ಗೆ 6 ವಿಕೆಟ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.