ಕ್ರಿಕೆಟ್: ರಾಜಾಜಿನಗರ ಚಾಂಪಿಯನ್ ಬೆಂಗಳೂರು: ರಾಜಾಜಿನಗರ ಕ್ರಿಕೆಟರ್ಸ್ ತಂಡವು ಸರ್ ಮಿರ್ಜಾ ಇಸ್ಮಾಯಿಲ್ ಶೀಲ್ಡ್‌ ಕ್ರಿಕೆಟ್ ಟೂರ್ನಿಯ ಮೊದಲ ಡಿವಿಷನ್ ಲೀಗ್‌ನ ಪ್ರಥಮ ಗುಂಪಿನ ಪ್ರಶಸ್ತಿ ಜಯಿಸಿತು. ಗುರುವರ ನಡೆದ ಪಂದ್ಯದಲ್ಲಿ ಫರ್ಹಾನ್ ಮಗಿ (79) ಮತ್ತು ಕ್ರಾಂತಿಕುಮಾರ್ (ಔಟಾಗದೆ 85) ಅವರ ಬ್ಯಾಟಿಂಗ್ ಬಲದಿಂದ ರಾಜಾಜಿನಗರವು 5 ವಿಕೆಟ್‌ಗಳಿಂದ ಮಾಡರ್ನ್ ಕ್ರಿಕೆಟ್ ಕ್ಲಬ್ ಎದುರು ಗೆದ್ದಿತು. ಸಂಕ್ಷಿಪ್ತ ಸ್ಕೋರು: ಮಾಡರ್ನ್ ಸಿಸಿ: 50 ಓವರ್‌ಗಳಲ್ಲಿ 6ಕ್ಕೆ 314 (ಮೊಹಮ್ಮದ್ ಅಕೀಬ್ ಜಾವೇದ್ 152, ಪೃಥ್ವಿ ಸದಾನಂದ 42, ಲೋಚನ್ ಅಪ್ಪಣ್ಣ 68, ಎಚ್‌.ಎಸ್. ಶರತ್ 55ಕ್ಕೆ2, ಎಸ್‌.ಎಂ. ಶಮಂತ್ 36ಕ್ಕೆ2) ರಾಜಾಜಿನಗರ ಕ್ರಿಕೆಟರ್ಸ್: 46.2 ಓವರ್‌ಗಳಲ್ಲಿ 5ಕ್ಕೆ 315 (ನಿಹಾಲ್ ಉಳ್ಳಾಲ 45, ಫರ್ಹಾನ್ ಮಾಗಿ 79, ಕ್ರಾಂತಿಕುಮಾರ್ ಔಟಾಗದೆ 85, ಶ್ರೀಹರಿ 28, ಶಿವರಾಜ್ ಔಟಾಗದೆ 62, ಆಯುಷ್ ಕುಮಾರ್ ಬಾರಿಕ್ 36ಕ್ಕೆ3) ಫಲಿತಾಂಶ: ರಾಜಾಜಿನಗರಕ್ಕೆ 5 ವಿಕೆಟ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.