ಕೆಎಸ್‌ಸಿಎ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿ: ಶತಕ ವಂಚಿತ ರಾಬಿನ್ ಉತ್ತಪ್ಪ ಬೆಂಗಳೂರು: ಸ್ಫೋಟಕ ಹೊಡೆತಗಳ ಆಟಗಾರ ರಾಬಿನ್ ಉತ್ತಪ್ಪ (99, 52 ಎಸೆತ, 7 ಬೌಂಡರಿ, 8 ಸಿಕ್ಸರ್‌) ಕೇವಲ ಒಂದು ರನ್‌ನಿಂದ ಶತಕ ತಪ್ಪಿಸಿಕೊಂಡರು. ಅವರ ಭರ್ಜರಿ ಬ್ಯಾಟಿಂಗ್ ಬಲದಿಂದ ವಿಜಯಾ ಕ್ರಿಕೆಟ್ ಕ್ಲಬ್‌ ತಂಡವು ಕೆಎಸ್‌ಸಿಎ ಟಿ20 ಕ್ರಿಕೆಟ್ ಟೂರ್ನಿಯ ಸೂಪರ್‌ ಲೀಗ್‌ ಪಂದ್ಯದಲ್ಲಿ ಸೋಮವಾರ 128 ರನ್‌ಗಳಿಂದ ದೂರವಾಣಿ ಕ್ರಿಕೆಟರ್ಸ್ ತಂಡವನ್ನು ಮಣಿಸಿತು. ಉತ್ತಪ್ಪ ಅವರಿಗೆ ಉತ್ತಮ ಸಹಕಾರ ನೀಡಿದ ಶಿವರಾಜ್‌ ಎಸ್‌. 22 ಎಸೆತಗಳಲ್ಲಿ ಔಟಾಗದೆ 63 ರನ್‌ ಗಳಿಸಿದರು. ಅವರ ಬ್ಯಾಟಿಂಗ್‌ನಲ್ಲಿ ಆರು ಸಿಕ್ಸರ್‌ ಒಂದು ಬೌಂಡರಿ ಇದ್ದವು. ಸಂಕ್ಷಿಪ್ತ ಸ್ಕೋರುಗಳು ವಿಜಯಾ ಕ್ರಿಕೆಟ್‌ ಕ್ಲಬ್‌: 20 ಓವರ್‌ಗಳಲ್ಲಿ 2 ವಿಕೆಟ್‌ಗೆ 221 (ರಾಬಿನ್‌ ಉತ್ತಪ್ಪ 99, ಶ್ರೀ ಕೃಷ್ಣ 51, ಶಿವರಾಜ್ ಎಸ್‌. ಔಟಾಗದೆ 63). ದೂರವಾಣಿ ಕ್ರಿಕೆಟರ್ಸ್‌ (1): 20 ಓವರ್‌ಗಳಲ್ಲಿ 7 ವಿಕೆಟ್‌ಗೆ 93 (ಗೌತಮ್‌ ಆರ್‌. ರೆಡ್ಡಿ 48; ಅವಿಷೇಕ್‌ 10ಕ್ಕೆ 2, ಶಾನ್ ತ್ರಿಸ್ಟಾನ್ ಜೋಸೆಫ್‌ 15ಕ್ಕೆ 2). ಫಲಿತಾಂಶ: ವಿಜಯಾ ಕ್ರಿಕೆಟ್‌ ಕ್ಲಬ್‌ಗೆ 128 ರನ್‌ಗಳ ಗೆಲುವು. ಜವಾಹರ್ ಕ್ರಿಕೆಟ್ ಕ್ಲಬ್‌ (2): 20 ಓವರ್‌ಗಳಲ್ಲಿ 5 ವಿಕೆಟ್‌ಗೆ 138 (ಪರೀಕ್ಷಿತ್ ಒಕ್ಕುಂದ 28, ರೋಹಿತ್ ಸುಂದರ್‌ 30, ಕುಮಾರ್ ಎಲ್‌.ಆರ್‌. 28, ಚೈತನ್ಯ ಔಟಾಗದೆ 36, ದರ್ಶನ್‌ ಎಂ.ಬಿ. 15ಕ್ಕೆ 2). ವಲ್ಚರ್ಸ್‌ ಕ್ರಿಕೆಟ್‌ ಕ್ಲಬ್‌: 19.5 ಓವರ್‌ಗಳಲ್ಲಿ 5 ವಿಕೆಟ್‌ಗೆ 139 (ಕರುಣ್‌ ನಾಯರ್‌ 22, ಶ್ರೀಜಿತ್‌ ಕೆ.ಎಲ್. 57, ಪವನ್ ದೇಶಪಾಂಡೆ ಔಟಾಗದೆ 34; ಅನಿರುದ್ಧ ರಾವ್ 21ಕ್ಕೆ 3). ಫಲಿತಾಂಶ: ವಲ್ಚರ್ಸ್‌ ಕ್ರಿಕೆಟ್‌ ಕ್ಲಬ್‌ಗೆ 5 ವಿಕೆಟ್‌ಗಳ ಜಯ. ಜವಾನ್ಸ್ ಕ್ರಿಕೆಟ್‌ ಕ್ಲಬ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 141 (ನಿಶಿತ್ ರಾಜ್ 52, ಸತ್ಯ ಸ್ವರೂಪ್‌ 24; ನವೀನ್ ಪಾಟೀಲ್‌ 33ಕ್ಕೆ 2, ಲೋಹಿತ್ ಗೌಡ 19ಕ್ಕೆ 2, ಭರತ್‌ ಡಿ. 23ಕ್ಕೆ 2). ದ ಬೆಂಗಳೂರು ಕ್ರಿಕೆಟರ್ಸ್‌: 19.1 ಓವರ್‌ಗಳಲ್ಲಿ 2 ವಿಕೆಟ್‌ಗೆ 142 (ಆರ್ಯನ್ ಶ್ರೀವಾಸ್ತವ್‌ 44, ಅಕ್ಷಯ್ ಆರ್‌. ಔಟಾಗದೆ 65, ಅರುಣ್ ಕೆ. 26). ಫಲಿತಾಂಶ: ದ ಬೆಂಗಳೂರು ಕ್ರಿಕೆಟರ್ಸ್‌ಗೆ 8 ವಿಕೆಟ್‌ಗಳ ಗೆಲುವು. ಸರ್‌ ಸಯ್ಯದ್ ಕ್ರಿಕೆಟರ್ಸ್‌: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 128 (ಮೋಹಿತ್ ಬಿ.ಎ. ಔಟಾಗದೆ 56; ಕುಶಾಲ್‌ ಗೌಡ 29ಕ್ಕೆ 2, ಮನೋಜ್‌ ಕುಮಾರ್‌ 39ಕ್ಕೆ 2). ಜುಪಿಟರ್ ಕ್ರಿಕೆಟರ್ಸ್ ಅಸೋಸಿಯೇಷನ್‌: 16.5 ಓವರ್‌ಗಳಲ್ಲಿ 90 ಆಲೌಟ್‌ (ಖುಷ್ ಪ್ರಕಾಶ್‌ ಭನ್ಸಾಲಿ 24, ಸುಮುಖ ಪ್ರಸಾದ್‌ ಎಸ್‌. 26; ವಿದ್ವತ್ 20ಕ್ಕೆ 3, ಕುಶಾಲ್ ಮಹೇಶ್ ವಾಧ್ವಾನಿ 14ಕ್ಕೆ 2, ಕ್ರಾಂತಿ ಕುಮಾರ್‌ 10ಕ್ಕೆ 4). ಫಲಿತಾಂಶ: ಸರ್‌ ಸಯ್ಯದ್ ಕ್ರಿಕೆಟರ್ಸ್‌ಗೆ 38 ರನ್‌ಗಳ ಗೆಲುವು. ಜವಾಹರ್ ಸ್ಪೋರ್ಟ್ಸ್ ಕ್ಲಬ್‌ (1): 20 ಓವರ್‌ಗಳಲ್ಲಿ 9 ವಿಕೆಟ್‌ಗೆ 145 (ಅಸ್ಲಂ ಎ.ಪಿ. 34, ಪ್ರಜ್ವಲ್ ರೆಡ್ಡಿ 29, ಹಿಮಾದ್ರಿ 21; ಸುಲೇಮಾನ್ ತಿಳಗುಳ 28ಕ್ಕೆ 2, ರಜತ್‌ ಹೆಗ್ಡೆ 24ಕ್ಕೆ 2, ಕಿಶೋರ್ 13ಕ್ಕೆ 3). ಚಿಂತಾಮಣಿ ಸ್ಪೋರ್ಟ್ಸ್ ಅಸೋಸಿಯೇಷನ್‌, ಚಿಂತಾಮಣಿ: 14.5 ಓವರ್‌ಗಳಲ್ಲಿ 79 ಆಲೌಟ್‌ (ಮಿರ್ ಕೌನೇನ್ ಅಬ್ಬಾಸ್‌ 27; ಕೆ.ಸಿ.ಕಾರಿಯಪ್ಪ 13ಕ್ಕೆ 2, ಶಿಮೋನ್ ಲೂಯಿಸ್‌ 21ಕ್ಕೆ 3, ಶ್ರೇಯಸ್ ಬಿ.ಎಂ. 16ಕ್ಕೆ 4). ಫಲಿತಾಂಶ: ಜವಾಹರ್ ಸ್ಪೋರ್ಟ್ಸ್ ಕ್ಲಬ್‌ಗೆ (1) 66 ರನ್‌ಗಳ ಜಯ. ಕೆಂಬ್ರಿಡ್ಜ್ ಕ್ರಿಕೆಟ್‌ ಕ್ಲಬ್‌: 19.5 ಓವರ್‌ಗಳಲ್ಲಿ 124 ಆಲೌಟ್‌ (ಮೊಹಮ್ಮದ್ ತಾಹ 45, ಮೊಹಮ್ಮದ್ ಎ. ಜಾವೇದ್‌ 46; ವೈಶಾಖ್‌ ವಿ. 23ಕ್ಕೆ 3, ಶ್ರೀಶಾ ಎಸ್‌.ಆಚಾರ್ 11ಕ್ಕೆ 4). ಸೋಷಿಯಲ್ ಕ್ರಿಕೆಟರ್ಸ್‌: 18 ಓವರ್‌ಗಳಲ್ಲಿ 4 ವಿಕೆಟ್‌ಗೆ 125 (ವೈಶಾಖ್‌ ವಿ. ಔಟಾಗದೆ 48, ಪೃಥ್ವಿರಾಜ್‌ ಔಟಾಗದೆ 32; ಕೆ.ಆದಿತ್ಯನ್‌ 24ಕ್ಕೆ 3). ಫಲಿತಾಂಶ: ಸೋಷಿಯಲ್ ಕ್ರಿಕೆಟರ್ಸ್‌ಗೆ 6 ವಿಕೆಟ್‌ಗಳ ಗೆಲುವು. ಬೆಂಗಳೂರು ಯುನೈಟೆಡ್‌ ಕ್ರಿಕೆಟ್‌ ಕ್ಲಬ್‌ (1): 20 ಓವರ್‌ಗಳಲ್ಲಿ 9 ವಿಕೆಟ್‌ಗೆ 133 (ಶರತ್ ಶ್ರೀನಿವಾಸ್‌ 46, ಸಮರ್ಥ್‌ ಶ್ರೀನಿವಾಸ್‌ 31; ಕೆ.ಎಸ್‌.ದೇವಯ್ಯ 27ಕ್ಕೆ 2, ಅಭಿಲಾಷ್‌ 22ಕ್ಕೆ 3). ಸ್ವಸ್ತಿಕ್‌ ಯೂನಿಯನ್ ಕ್ರಿಕೆಟ್‌ ಕ್ಲಬ್‌ (1): 19.3 ಓವರ್‌ಗಳಲ್ಲಿ 5 ವಿಕೆಟ್‌ಗೆ 134 (ಸಮರ್ಥ್‌ ಆರ್‌. 20, ಕೆ.ವಿ.ಸಿದ್ಧಾರ್ಥ್‌ 25, ಶ್ರೇಯಸ್ ಗೋಪಾಲ್‌ 42, ಕೆ.ಗೌತಮ್‌ ಔಟಾಗದೆ 20; ಪ್ರಣವ್‌ ಭಾಟಿಯಾ 18ಕ್ಕೆ 3). ಫಲಿತಾಂಶ: ಸ್ವಸ್ತಿಕ್‌ ಯೂನಿಯನ್ ಕ್ರಿಕೆಟ್‌ ಕ್ಲಬ್‌ಗೆ (1) 5 ವಿಕೆಟ್‌ಗಳ ಗೆಲುವು. ಫ್ರೆಂಡ್ಸ್ ಯೂನಿಯನ್ ಕ್ರಿಕೆಟ್ ಕ್ಲಬ್‌ (1): 20 ಓವರ್‌ಗಳಲ್ಲಿ 7 ವಿಕೆಟ್‌ಗೆ 133 (ಶಿವಕುಮಾರ್ ಬಿ. 41, ಮಿಥುನ್ ಭಟ್‌ 29, ಶಶೀಂದ್ರ ಕೆ. 25; ಶರಣ್ ಗೌಡ 34ಕ್ಕೆ 2, ಆದಿತ್ಯ ಸೋಮಣ್ಣ 30ಕ್ಕೆ 2). ಮೌಂಟ್‌ ಜಾಯ್ ಕ್ರಿಕೆಟ್ ಕ್ಲಬ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 134 (ಶರಣ್ ಗೌಡ 30, ಅರುಣ್‌ ಮೊನ್ನಪ್ಪ ಪಿ.ಸಿ. 53, ಸಮರ್ಥ್‌ ಊಟಿ 23, ಅನಿಲ್‌ ಐ.ಜಿ. 33ಕ್ಕೆ 3, ರಿಷಿ ಬೋಪಣ್ಣ ಎಸ್‌.ಎ. 27ಕ್ಕೆ 3). ಫಲಿತಾಂಶ: ಮೌಂಟ್ ಜಾಯ್ ಕ್ರಿಕೆಟ್‌ ಕ್ಲಬ್‌ಗೆ 1 ವಿಕೆಟ್‌ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.