ಶುಭಾಂಗ್ ಅರ್ಧಶತಕ: ಕೆಂಬ್ರಿಡ್ಜ್‌ ಕ್ರಿಕೆಟ್‌ ಕ್ಲಬ್‌ಗೆ ಭರ್ಜರಿ ಜಯ ಬೆಂಗಳೂರು: ಶುಭಾಂಗ್ ಹೆಗ್ಡೆ (74) ಅವರ ಅಮೋಘ ಬ್ಯಾಟಿಂಗ್‌ ನೆರವಿನಿಂದ ಕೆಂಬ್ರಿಡ್ಜ್ ಕ್ರಿಕೆಟ್‌ ಕ್ಲಬ್‌ ತಂಡವು ಜಯಿಸಿತು. ಇಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ಟ್ವೆಂಟಿ–20 ಟೂರ್ನಿಯಲ್ಲಿ ಶನಿವಾರ ಕೆವಿಲಿಯರ್ಸ್ ಕ್ರಿಕೆಟ್ ಕ್ಲಬ್‌ ತಂಡವನ್ನು 122 ರನ್‌ಗಳಿಂದ ಸೋಲಿಸಿತು. ಸಂಕ್ಷಿಪ್ತ ಸ್ಕೋರುಗಳು: ಕೆಂಬ್ರಿಡ್ಜ್‌ ಕ್ರಿಕೆಟ್‌ ಕ್ಲಬ್‌: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 214 (ಶುಭಾಂಗ್‌ ಹೆಗ್ಡೆ 74, ಅಭಿನವ್‌ ಎಂ.42, ಅಕೀಬ್‌ ಜಾವೇದ್‌ 49; ವಿಷ್ಣು ಜೈನ್‌ 30ಕ್ಕೆ 2). ಕೆವಿಲಿಯರ್ಸ್ ಕ್ರಿಕೆಟ್ ಕ್ಲಬ್‌: 16.1 ಓವರ್‌ಗಳಲ್ಲಿ 92 ಆಲೌಟ್‌ (ಪ್ರವೇಶ್‌ ಗೌಡ ಔಟಾಗದೆ 41, ಸಂಕಲ್ಪ್‌ ಎಸ್‌.ಎಸ್‌. 17ಕ್ಕೆ 2, ಧೀರಜ್ ಎಸ್‌. 18ಕ್ಕೆ 3). ಫಲಿತಾಂಶ:ಕೆಂಬ್ರಿಡ್ಜ್‌ ಕ್ರಿಕೆಟ್‌ ಕ್ಲಬ್‌ಗೆ 122 ರನ್‌ಗಳ ಜಯ. ವರ್ಲ್‌ವಿಂಡ್ ಕ್ರಿಕೆಟರ್ಸ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 125 (ಅನುರಾಜ್‌ ಪಿ. 22, ಅದ್ವೈತ್‌ ಬಿ.ಜೆ. 37; ಕರಣ್ ಎಂ.ಸಿ. 24ಕ್ಕೆ 2, ಜಯಂತ್ ಎನ್‌. 25ಕ್ಕೆ 2, ಹಾರ್ದಿಕ್‌ ರಾಘವ್‌ 18ಕ್ಕೆ 2). ಸ್ಪಾರ್ಟನ್ಸ್ ಕ್ರಿಕೆಟ್ ಕ್ಲಬ್: 15.3 ಓವರ್‌ಗಳಲ್ಲಿ 3 ವಿಕೆಟ್‌ಗೆ 127 (ಮಂಜುನಾಥ್‌ ಸಿ. 29, ಸಚಿನ್‌ ಆರ್‌. ಗಣಕಲ್‌ ಔಟಾಗದೆ 51; ಕುಶಲ್ ಕತಾರ 35ಕ್ಕೆ 2). ಫಲಿತಾಂಶ: ಸ್ಪಾರ್ಟನ್ಸ್ ಕ್ರಿಕೆಟ್ ಕ್ಲಬ್‌ಗೆ 7 ವಿಕೆಟ್‌ಗಳ ಜಯ. ನ್ಯಾಷನಲ್ ಯುನೈಟೆಡ್‌ ಕ್ರಿಕೆಟ್‌ ಕ್ಲಬ್‌: 19 ಓವರ್‌ಗಳಲ್ಲಿ 117 ಆಲೌಟ್‌ (ಜೆಫಿನ್ ಪಾಲ್ 36, ಸಚಿನ್‌ 22, ಚಿರಾಗ್‌ 33; ಪ್ರದ್ಯುಮ್ನ ಎಸ್‌. 24ಕ್ಕೆ 4, ಅಖಿಲ್‌ ಬಿ. 9ಕ್ಕೆ 2, ಅನೀಷ್‌ ಡಿ.ವಿ. 23ಕ್ಕೆ 2). ಫ್ರೆಂಡ್ಸ್ ಯೂನಿಯನ್‌ ಕ್ರಿಕೆಟ್ ಕ್ಲಬ್‌ (2): 15.2 ಓವರ್‌ಗಳಲ್ಲಿ 1 ವಿಕೆಟ್‌ಗೆ 120 (ನವೀನ್ ಬಾಲಾ ಔಟಾಗದೆ 56, ಅಖಿಲ್ ಬಿ. 42). ಫಲಿತಾಂಶ: ಫ್ರೆಂಡ್ಸ್ ಯೂನಿಯನ್‌ ಕ್ರಿಕೆಟ್ ಕ್ಲಬ್‌ಗೆ (2) 9 ವಿಕೆಟ್‌ಗಳ ಗೆಲುವು. ಯಂಗ್ ಲಯನ್ಸ್ ಕ್ರಿಕೆಟ್‌ ಕ್ಲಬ್‌: 16.1 ಓವರ್‌ಗಳಲ್ಲಿ 111 ಆಲೌಟ್‌ (ಸಂಜಯ್‌ 36; ಕುಮಾರ್ ಎಲ್‌.ಆರ್‌. 13ಕ್ಕೆ 2, ಅದ್ವೈತ್ ಶೆಟ್ಟಿ 34ಕ್ಕೆ 3, ಸುಷಮೀಂದ್ರ ಎ. 21ಕ್ಕೆ 2). ಜವಾಹರ್ ಸ್ಪೋರ್ಟ್ಸ್ ಕ್ಲಬ್‌ (2): 13.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 115 (ಸೂರ್ಯ ಔಟಾಗದೆ 42, ವಾಸೀಫ್‌ ಔಟಾಗದೆ 68). ಫಲಿತಾಂಶ: ಜವಾಹರ್ ಸ್ಪೋರ್ಟ್ಸ್ ಕ್ಲಬ್‌ಗೆ (2) 10 ವಿಕೆಟ್‌ಗಳ ಗೆಲುವು. ಬೆಂಗಳೂರು ಆಕೇಷನಲ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 183 (ನಿತಿನ್‌ ಎಸ್‌.21, ಸುಮಿತ್ ಧವನಿ 65, ಶ್ರೀಹರಿ 25, ಪ್ರಜ್ವಲ್‌ ಔಟಾಗದೆ 22; ಅನೂಪ್‌ 21ಕ್ಕೆ 4, ಸ್ಮಯನ್‌ 32ಕ್ಕೆ 3). ಜಾಲಿ ಕ್ರಿಕೆಟರ್ಸ್: 19.3 ಓವರ್‌ಗಳಲ್ಲಿ 154 ಆಲೌಟ್‌ (ಮಿತೇಶ್‌ 48, ಪ್ರೇಮನಾಥ್‌ ಜೆ.ಜಿ. 47; ಪ್ರಜ್ವಲ್‌ 39ಕ್ಕೆ 4, ಅಬುಲ್ ಹಸನ್ ಖಾಲಿದ್‌ 40ಕ್ಕೆ 2, ಒವಾಯಿಸ್‌ 15ಕ್ಕೆ 2, ನಿತಿನ್‌ ಎಸ್‌. 22ಕ್ಕೆ 2). ಫಲಿತಾಂಶ: ಬೆಂಗಳೂರು ಆಕೇಷನಲ್ಸ್ ತಂಡಕ್ಕೆ 29 ರನ್‌ಗಳ ಜಯ. ಯಂಕೀಸ್‌ ಕ್ರಿಕೆಟ್‌ ಕ್ಲಬ್‌: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 104 (ಅದ್ವೈತ್‌ 21, ಕ್ರಿಷಿವ್‌ ಔಟಾಗದೆ 34; ಸಿದ್ರಾಮ್ 14ಕ್ಕೆ 2). ವಿಜಯಾ ಕ್ರಿಕೆಟ್‌ ಕ್ಲಬ್‌: 10.1 ಓವರ್‌ಗಳಲ್ಲಿ 1 ವಿಕೆಟ್‌ಗೆ 105 (ಸಿದ್ರಾಮ್‌ ಔಟಾಗದೆ 50, ಕೃಷ್ಣ 31). ಫಲಿತಾಂಶ: ವಿಜಯಾ ಕ್ರಿಕೆಟ್‌ ಕ್ಲಬ್‌ಗೆ 9 ವಿಕೆಟ್‌ಗಳ ಗೆಲುವು. ವಿಜಯಾ ಕ್ರಿಕೆಟ್ ಕ್ಲಬ್‌, ಮಾಲೂರು: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 103 (ಯಶ್‌ 23, ಅಶ್ವಿನ್‌ 30; ಭರತ್‌ 11ಕ್ಕೆ 3, ರೋಹಿತ್ 22ಕ್ಕೆ 2, ಬೆನೆಡಿಕ್ಟ್‌ 11ಕ್ಕೆ 2). ವಿಕ್ರಂ ಕ್ರಿಕೆಟ್‌ ಕ್ಲಬ್‌: 19.4 ಓವರ್‌ಗಳಲ್ಲಿ 7 ವಿಕೆಟ್‌ಗೆ 104 (ಬೆನೆಡಿಕ್ಟ್ 42, ಧವಳ್‌ 31; ದಿಲೀಪ್‌ 15ಕ್ಕೆ 2, ಜಾಯ್ ದೇಸಾಯಿ 19ಕ್ಕೆ 2, ಧೃವ 20ಕ್ಕೆ 2). ಫಲಿತಾಂಶ: ವಿಕ್ರಂ ಕ್ರಿಕೆಟ್‌ ಕ್ಲಬ್‌ಗೆ 3 ವಿಕೆಟ್‌ ಜಯ. ವಡಿಯರ್‌ ಕ್ರಿಕೆಟ್‌ ಕ್ಲಬ್‌: 18 ಓವರ್‌ಗಳಲ್ಲಿ 8 ವಿಕೆಟ್‌ಗೆ 100 (ಫೈಜನ್‌ ಖಾನ್‌ 31, ಮೊಹಮ್ಮದ್‌ ಬಿಲಾಲ್‌ ಔಟಾಗದೆ 28; ರಾಜ್‌ ಗಾಲ 14ಕ್ಕೆ 2, ಪ್ರಶಾಂತ್ ಎಸ್‌. 13ಕ್ಕೆ 2). ಸ್ವಸ್ತಿಕ್ ಯೂನಿಯನ್ ಕ್ರಿಕೆಟ್‌ ಕ್ಲಬ್‌ (2): 13 ಓವರ್‌ಗಳಲ್ಲಿ 3 ವಿಕೆಟ್‌ಗೆ 101 (ಜೋಯಲ್ ಜಾಸ್ಪರ್‌ 42, ಅಜಾನ್ ತೋಟ ಔಟಾಗದೆ 47). ಫಲಿತಾಂಶ: ಸ್ವಸ್ತಿಕ್ ಯೂನಿಯನ್ ಕ್ರಿಕೆಟ್‌ ಕ್ಲಬ್‌ಗೆ (2) 7 ವಿಕೆಟ್‌ಗಳ ಗೆಲುವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.