ಶಾರೂಖ್ ಅಲ್ಲ ಡೇವಿಡ್ ವಾರ್ನರ್: ವೈರಲ್ ವಿಡಿಯೊ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಬಾಲಿವುಡ್ ನಟ ಶಾರೂಖ್ ಖಾನ್ ಅವರ ದೊಡ್ಡ ಫ್ಯಾನ್ ಅನ್ಸುತ್ತೆ. ಡೇವಿಡ್ ವಾರ್ನರ್ ಅವರ ಇನ್‌ಸ್ಟಾಗ್ರಾಮ್ ಪೇಜ್ ನೋಡಿದ್ರೆ ಈ ಮಾತಿನ ಹಿಂದಿನ ಮರ್ಮ ಅರಿವಾಗುತ್ತೆ. ಹೌದು, ಇನ್‌ಸ್ಟಾದಲ್ಲಿ ಶಾರೂಖ್ ಖಾನ್ ಅವರ ‘ಡಾನ್ 2’ಚಿತ್ರದ ಸಾಹಸ ದೃಶ್ಯವನ್ನುವಾರ್ನರ್ ಪೋಸ್ಟ್ ಮಾಡಿದ್ದಾರೆ. ಆದರೆ, ಅದರಲ್ಲಿ ಶಾರೂಖ್ ಮುಖದ ಬದಲಿಗೆ ತಮ್ಮ ಮುಖವನ್ನು ರೀಫೇಸ್ ಮಾಡಿದ್ದಾರೆ. ವಿಡಿಯೊ ಅತ್ಯಂತ ಕುತೂಹಲಭರಿತವಾಗಿದ್ದು, ವೈರಲ್ ಆಗಿದೆ. ವಿಡಿಯೊ ಜೊತೆಗೆ, ಇದರಲ್ಲಿನ ಹಿಂಸಾಚಾರದ ಬಗ್ಗೆ ಕ್ಷಮಿಸಿ, ಆದರೆ ನಿಮಗೆ ಇದು ಸಿಗುತ್ತದೆ ಎಂದು ನಾನು ಭಾವಿಸಿರಲಿಲ್ಲ ಅಂತಾ ಬರೆದುಕೊಂಡಿದ್ದಾರೆ. (@davidwarner31) ಲಾಕ್ ಡೌನ್ ಸಂದರ್ಭದಲ್ಲಿ ಬುಟ್ಟಬೊಮ್ಮ ಹಾಡಿ್ಗೆ ಕುಟುಂಬದ ಜೊತೆ ಸ್ಟೆಪ್ ಹಾಕಿದ್ದ ವಾರ್ನರ್ ವಿಡಿಯೋ ಸಹ ಇದೇ ರೀತಿ ಗಮನ ಸೆಳೆದಿತ್ತು. (@davidwarner31) ಇದೀಗ, ಡೇವಿಡ್ ವಾರ್ನರ್ ಮಾಡಿರುವ ಹೊಸ ವಿಡಿಯೊವನ್ನು ಒಂದು ದಿನದೊಳಗೆ ಲಕ್ಷ ಲಕ್ಷ ಜನ ನೋಡಿದ್ದಾರೆ. ಸಾವಿರಾರು ಕಾಮೆಂಟ್ ಬಂದಿವೆ. ಹಲವು ಅಭಿಮಾನಿಗಳು ಕ್ರಿಕೆಟ್ ಬಿಟ್ಟು ಬಾಲಿವುಡ್ ಸೇರುವ ನಿರ್ಣಯ ಮಾಡುವಂತೆ ಮನವಿ ಮಾಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.