ವಿರಾಟ್‌ ಕೊಹ್ಲಿಯದು ಕೊಳಕು ನಾಲಿಗೆ: ಟ್ವೀಟಿಸಿ ನಂತರ ಅಳಿಸಿ ಹಾಕಿದ ಕಾಂಪ್ಟನ್ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿಯದು ಕೊಳಕು ನಾಲಿಗೆ ಎಂದು ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ನಿಕ್‌ ಕಾಂಪ್ಟನ್‌ ಅವರು ಟ್ವೀಟಿಸಿ ನಂತರ ಅದನ್ನು ಅಳಿಸಿ ಹಾಕಿದ್ದಾರೆ. 2012ರಲ್ಲಿ ಭಾರತದಲ್ಲಿ ನಡೆದ ಟೆಸ್ಟ್ ಸರಣಿ ವೇಳೆ ನಡೆದ ಘಟನೆಯೊಂದನ್ನು ನಿಕ್‌ ಕಾಂಪ್ಟನ್‌ ನೆನಪಿಸಿಕೊಂಡಿದ್ದಾರೆ. 'ವಿರಾಟ್‌ ಕೊಹ್ಲಿ ಅತ್ಯಂತ ಕೆಟ್ಟ ಮಾತುಗಳನ್ನು ಆಡುವ ವ್ಯಕ್ತಿಯಾಗಿದ್ದಾರೆ. 2012ರಲ್ಲಿ ಅನುಭವಿಸಿದ ಅವಮಾನವನ್ನು ನಾನು ಎಂದಿಗೂ ಮರೆಯುವುದಿಲ್ಲ. ಆ ಘಟನೆ ನನ್ನನ್ನು ತಬ್ಬಿಬ್ಬುಗೊಳಿಸಿತ್ತು. ಕೊಹ್ಲಿ ನನ್ನನ್ನು ಕೆಟ್ಟದ್ದಾಗಿ ನಿಂದಿಸಿದ್ದರು' ಎಂದು ಕಾಂಪ್ಟನ್‌ ತಿಳಿಸಿದ್ದಾರೆ. ಸಚಿನ್ ತೆಂಡೂಲ್ಕರ್, ಕೇನ್ ವಿಲಿಯಮ್ಸ್‌ ಮತ್ತು ಜೋ ರೂಟ್ ತರಹದ ಆಟಗಾರರ ವಿನಮ್ರತೆ ಮತ್ತು ಸೌಜನ್ಯವನ್ನು ಕಾಂಪ್ಟನ್‌ ಹೊಗಳಿದ್ದಾರೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಅವರು ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ಜೊತೆ ವಾಗ್ವಾದದಲ್ಲಿ ತೊಡಗಿದ್ದರು. ಆ ಹಿನ್ನೆಲೆಯಲ್ಲಿ ಕಾಂಪ್ಟನ್‌ ಟ್ವೀಟ್‌ ಮಾಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.