: ಭಾರತ 244ಕ್ಕೆ ಆಲೌಟ್; 94 ರನ್‌ ಹಿನ್ನೆಡೆ ಸಿಡ್ನಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ಸಾಗುತ್ತಿರುವ ಮೂರನೇ ಟೆಸ್ಟ್ ಪಂದ್ಯದ ತೃತೀಯ ದಿನದಾಟದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿರುವ ಟೀಮ್ ಇಂಡಿಯಾ 244 ರನ್‌ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ ಮೊದಲ ಇನ್ನಿಂಗ್ಸ್‌ನಲ್ಲಿ 94 ರನ್‌ಗಳ ಹಿನ್ನೆಡೆ ಅನುಭವಿಸಿದೆ. ಮಗದೊಮ್ಮೆ ಆಸೀಸ್ ವೇಗದ ದಾಳಿಗೆ ಕುಸಿತ ಅನುಭವಿಸಿದ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಹೋರಾಟ ಮನೋಭಾವವನ್ನೇ ತೋರಲಿಲ್ಲ. ಓಪನರ್ ಶುಭಮನ್ ಗಿಲ್ ಹಾಗೂ ಚೇತೇಶ್ವರ ಪೂಜಾರ ಅರ್ಧಶತಕ ಬಾರಿಸಿರುವುದನ್ನು ಹೊರತುಪಡಿಸಿದರೆ ಇತರೆ ಯಾವ ಬ್ಯಾಟ್ಸ್‌ಮನ್‌ನಿಂದ ಹೆಚ್ಚಿನ ಪಾಲುದಾರಿಕೆ ಮೂಡಿಬಂದಿಲ್ಲ. 96ಕ್ಕೆ 2 ಎಂಬ ಮೊತ್ತದಿಂದ ದಿನದಾಟ ಮುಂದುವರಿಸಿದ ಭಾರತಕ್ಕೆ ಕಲಾತ್ಮಕ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಆಸರೆಯಾದರು. ಅತ್ತ ನಾಯಕ ಅಜಿಂಕ್ಯ ರಹಾನೆ (22) ಹೆಚ್ಚು ಹೊತ್ತು ನಿಲ್ಲನಿಲ್ಲ.ಪ್ಯಾಟ್ ಕಮಿನ್ಸ್ ದಾಳಿಯಲ್ಲಿ ಕ್ಲೀನ್ ಬೌಲ್ಡ್ ಆದರು. ಹನುಮ ವಿಹಾರಿ (4) ರನೌಟ್ ಆಗುವುದರೊಂದಿಗೆ ಭಾರತಕ್ಕೆ ಮಗದೊಂದು ಹೊಡೆತ ಬಿತ್ತು. ಇದನ್ನೂ ಓದಿ:27ನೇ ಟೆಸ್ಟ್ ಶತಕ; ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಸ್ಟೀವನ್ ಸ್ಮಿತ್ ಈ ಹಂತದಲ್ಲಿ ಜೊತೆಗೂಡಿದ ಪೂಜಾರ ಹಾಗೂ ರಿಷಭ್ ಪಂತ್ 53 ರನ್‌ಗಳ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದರು. ಆದರೆ ಉತ್ತಮವಾಗಿ ಆಡುತ್ತಿದ್ದ ಪಂತ್ (36) ವಿಕೆಟ್ ಪತನದೊಂದಿಗೆ ಭಾರತ ಧಿಡೀರ್ ಪತನವನ್ನು ಕಂಡಿತ್ತು. ! 10 # ../4I05u5eEt9 ಅರ್ಧಶತಕ ಬೆನ್ನಲ್ಲೇ ಚೇತೇಶ್ವರ ಪೂಜಾರ ಸಹ ವಿಕೆಟ್ ಒಪ್ಪಿಸಿದರು. 176 ಎಸೆತಗಳನ್ನು ಎದುರಿಸಿದ ಪೂಜಾರ ಐದು ಬೌಂಡರಿಗಳ ನೆರವಿನಿಂದ 50 ರನ್ ಗಳಿಸಿದರು. ಇದು ಟೆಸ್ಟ್ ವೃತ್ತಿ ಜೀವನದಲ್ಲಿ ಪೂಜಾರ ದಾಖಲಿಸಿದ ಅತಿ ನಿಧಾನವಾದ ಅರ್ಧಶತಕವಾಗಿದೆ. ಅಲ್ಲದೆ ಪ್ರಸ್ತುತ ಸರಣಿಯಲ್ಲಿ ಪ್ಯಾಟ್ ಕಮಿನ್ಸ್‌ಗೆ ನಾಲ್ಕನೇ ಬಾರಿಗೆ ವಿಕೆಟ್ ಒಪ್ಪಿಸಿದರು. ರವೀಂದ್ರ ಜಡೇಜ ಹೋರಾಟ ನಡೆಸಿದರೂ ವಿಕೆಟ್‌ನ ಮತ್ತೊಂದು ತುದಿಯಿಂದ ಸೂಕ್ತ ಬೆಂಬಲ ಸಿಗದೇ ನಿರಾಸೆ ಅನುಭವಿಸಿದರು. 28 ರನ್ ಗಳಿಸಿದ ಜಡೇಜ ಅಜೇಯರಾಗುಳಿದರು. ಅಂತಿಮವಾಗಿ ಭಾರತ 100.4 ಓವರ್‌ಗಳಲ್ಲೇ 244 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೂಂಡಿತ್ತು. ಇನ್ನುಳಿದಂತೆ ಆರ್. ಅಶ್ವಿನ್ (10), ನವದೀಪ್ ಸೈನಿ (3), ಜಸ್‌ಪ್ರೀತ್ ಬೂಮ್ರಾ (0) ಹಾಗೂ ಮೊಹಮ್ಮದ್ ಸಿರಾಜ್ (6) ನಿರಾಸೆ ಮೂಡಿಸಿದರು. ಇದನ್ನೂ ಓದಿ: : ಸ್ಮಿತ್ ಶತಕ; ಲಾಬುಷೇನ್ 91; ಆಸೀಸ್ 338ಕ್ಕೆ ಆಲೌಟ್ ಭಾರತ ತಂಡವು ಕೊನೆಯ ಆರುವಿಕೆಟ್‌ಗಳನ್ನು ಕೇವಲ 50 ರನ್ ಅಂತರದಲ್ಲಿ ಕಳೆದುಕೊಂಡಿತ್ತು. ಅದರಲ್ಲೂ ಮೂವರು ಆಟಗಾರರು ರನೌಟ್ ಆದರು. ಆಸೀಸ್ ಪರ ಪ್ಯಾಟ್ ಕಮಿನ್ಸ್ ನಾಲ್ಕು, ಜೋಶ್ ಹ್ಯಾಜಲ್‌ವುಡ್ ಎರಡು ಮತ್ತು ಮಿಚೆಲ್ ಸ್ಟಾರ್ಕ್ ಒಂದು ವಿಕೆಟ್ ಪಡೆದು ಮಿಂಚಿದರು. # ../5AIDJl47tJ ಈ ಮೊದಲು ಎರಡನೇ ದಿನದಾಟದಲ್ಲಿ ಸ್ಟೀವನ್ ಸ್ಮಿತ್ (131) ಅವರ ಅಮೋಘ ಶತಕದ ಹೊರತಾಗಿಯೂ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ಮೊತ್ತವನ್ನು 338 ರನ್‌ಗಳಿಗೆ ಸೀಮಿತಗೊಳಿಸುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿತ್ತು. ಸ್ಟೀವನ್ ಸ್ಮಿತ್ 27ನೇ ಟೆಸ್ಟ್ ಶತಕ ಬಾರಿಸಿದ್ದರೆ ಮಾರ್ನಸ್ ಲಾಬುಷೇನ್ 91 ರನ್ ಗಳಿಸಿ ಭಾರತವನ್ನು ಕಾಡಿದರು. ಭಾರತದ ಪರ ರವೀಂದ್ರ ಜಡೇಜ ನಾಲ್ಕು ವಿಕೆಟ್ ಕಬಳಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.