ಕಿಣಿ ಆರ್‌.ಆರ್‌. ತಂಡಕ್ಕೆ ಪ್ರಶಸ್ತಿ ಗರಿ ಬೆಂಗಳೂರು: ವನಿತಾ ವಿ.ಆರ್. ಅವರ ಭರ್ಜರಿ ಅರ್ಧಶತಕ (77, 49 ಎಸೆತ, 11 ಬೌಂಡರಿ, 3 ಸಿಕ್ಸರ್‌), ರಾಧಾ ಯಾದವ್‌ (13ಕ್ಕೆ 3) ಹಾಗೂ ದೇವಸ್ಮಿತಾ ದತ್ತ (14ಕ್ಕೆ 3) ಅವರ ಪ್ರಭಾವಿ ಬೌಲಿಂಗ್, ಕಿಣಿ ಆರ್‌.ಆರ್‌.ಸ್ಪೋರ್ಟ್ಸ್ ತಂಡಕ್ಕೆ ಗೆಲುವು ತಂದುಕೊಟ್ಟವು. ಫಾಲ್ಕನ್ ಕ್ರಿಕೆಟ್ ಕ್ಲಬ್ ಸುವರ್ಣ ಮಹೋತ್ಸವ ಅಂಗವಾಗಿ ನಡೆದ ಮಹಿಳಾ ಟ್ವೆಂಟಿ–20 ಟೂರ್ನಿಯಲ್ಲಿ ಕಿಣಿ ತಂಡವು ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಮಂಗಳವಾರ ನಡೆದ ಫೈನಲ್ ಹಣಾಹಣಿಯಲ್ಲಿ ಕಿಣಿ 40 ರನ್‌ಗಳಿಂದ ಹೆರಾನ್ಸ್ ತಂಡವನ್ನು ಪರಾಭವಗೊಳಿಸಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಿಣಿ, ನಿಗದಿತ ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 132 ರನ್‌ ಗಳಿಸಿತು. ಹೆರಾನ್ಸ್ ತಂಡವು ಇನ್ನೂ 19.4 ಓವರ್‌ಗಳಲ್ಲಿ 92 ರನ್‌ ಗಳಿಸಿ ಸರ್ವ ಪತನವಾಯಿತು. ಅಮೇಯಹಾಗೂ ಶೀನ್ ಸ್ಪೋರ್ಟ್ಸ್ ತಂಡಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ತಮ್ಮದಾಗಿಸಿಕೊಂಡವು. ಸಂಕ್ಷಿಪ್ತ ಸ್ಕೋರುಗಳು ಕಿಣಿ ಆರ್‌.ಆರ್‌.ಸ್ಪೋರ್ಟ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 132 (ವನಿತಾ ವಿ.ಆರ್‌. 77, ರೋಶನಿ ಕಿರಣ್ 16; ಪುಷ್ಪಾ ಕಿರೇಸೂರ್ 20ಕ್ಕೆ 3, ಅನಘಾ ಮುರಳಿ 14ಕ್ಕೆ 2, ಆಶಾ ಜಾಯ್‌ 16ಕ್ಕೆ 2). ಹೆರಾನ್ಸ್ ಸ್ಪೋರ್ಟ್ಸ್: 19.4 ಓವರ್‌ಗಳಲ್ಲಿ 92 ಆಲೌಟ್‌ (ದಿವ್ಯಾ ಜ್ಞಾನಾನಂದ 37; ರಾಧಾ ಯಾದವ್‌ 13ಕ್ಕೆ 3, ದೇವಸ್ಮಿತಾ ದತ್ತ 14ಕ್ಕೆ 3). ಫಲಿತಾಂಶ: ಕಿಣಿ ಆರ್‌.ಆರ್‌.ಸ್ಪೋರ್ಟ್ಸ್ ತಂಡಕ್ಕೆ 40 ರನ್‌ಗಳ ಜಯ ಪಂದ್ಯಶ್ರೇಷ್ಠ ಆಟಗಾರ್ತಿ: ವನಿತಾ ವಿ.ಆರ್‌. ಶೀನ್ ಸ್ಪೋರ್ಟ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 123 (ಜೆಮಿಮಾ ರಾಡ್ರಿಗಸ್‌ 62, ವೃಂದಾ ದಿನೇಶ್‌ ಔಟಾಗದೆ 22; ಅನುಜಾ ಪಾಟೀಲ್‌ 15ಕ್ಕೆ 3). ಅಮೇಯ ಸ್ಪೋರ್ಟ್ಸ್: 18.5 ಓವರ್‌ಗಳಲ್ಲಿ 3 ವಿಕೆಟ್‌ಗೆ 126 (ತಿರುಶ್ ಕಾಮಿನಿ 39, ವೇದಾ ಕೃಷ್ಣಮೂರ್ತಿ 44, ಅನುಜಾ ಪಾಟೀಲ್ ಔಟಾಗದೆ 26). ಫಲಿತಾಂಶ: ಅಮೇಯ ಸ್ಪೋರ್ಟ್ಸ್ ತಂಡಕ್ಕೆ 7 ವಿಕೆಟ್‌ಗಳ ಗೆಲುವು ಪಂದ್ಯಶ್ರೇಷ್ಠ ಆಟಗಾರ್ತಿ: ಅನುಜಾ ಪಾಟೀಲ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.