ಕ್ರಿಕೆಟ್: ಡಾಮ್ನಿಕ್‌ಗೆ ಐದು ವಿಕೆಟ್; ರೂಟ್ ಅರ್ಧಶತಕ ಗಾಲ್: ಇಂಗ್ಲೆಂಡ್‌ ತಂಡದ ಆಫ್‌ಸ್ಪಿನ್ನರ್ ಡಾಮ್ನಿಕ್ ಬೆಸ್ ಮೋಡಿಯ ಮುಂದೆ ಆತಿಥೇಯ ಶ್ರೀಲಂಕಾ ತಂಡವು ಗುರುವಾರ ಆರಂಭವಾದ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ ದೂಳೀಪಟವಾಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ತಂಡವು 46.1 ಓವರ್‌ಗಳಲ್ಲಿ 135 ರನ್‌ಗಳಿಗೆ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಇಂಗ್ಲೆಂಡ್ ವೇಗಿ ಡಾಮ್ನಿಕ್ ಬೆಸ್ (30ಕ್ಕೆ5) ಶಿಸ್ತಿನ ದಾಳಿಯ ಮುಂದೆ ಲಂಕಾ ತಂಡದ ಬ್ಯಾಟಿಂಗ್ ಪಡೆ ಉರುಳಿತು. ಸ್ಟುವರ್ಟ್ ಬ್ರಾಡ್ (20ಕ್ಕೆ3) ಲಂಕಾದ ಗಾಯದ ಮೇಲೆ ಬರೆ ಎಳೆದರು. ಅದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ತಂಡವು 41 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 127 ರನ್‌ ಗಳಿಸಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ 50ನೇ ಅರ್ಧಶತಕ ಗಳಿಸಿದ ಜೋ ರೂಟ್ (ಬ್ಯಾಟಿಂಗ್ 66; 115ಎಸೆತ) ಮತ್ತು ಜಾನಿ ಬೆಸ್ಟೊ (ಬ್ಯಾಟಿಂಗ್ 47; 91ಎಸೆತ) ಕ್ರೀಸ್‌ನಲ್ಲಿದ್ದಾರೆ. ಸಂಕ್ಷಿಪ್ತ ಸ್ಕೋರು ಶ್ರೀಲಂಕಾ: 46.1 ಓವರ್‌ಗಳಲ್ಲಿ 135 (ಕುಶಾಲ ಪೆರೆರಾ 20, ಏಂಜೆಲೊ ಮ್ಯಾಥ್ಯೂಸ್ 27, ದಿನೇಶ್ ಚಾಂಡಿಮಲ್ 28, ದಸನ್ ಶನಕಾ 23, ಸ್ಟುವರ್ಟ್‌ ಬ್ರಾಡ್ 20ಕ್ಕೆ3, ಡಾಮ್ನಿಕ್ ಬೆಸ್ 30ಕ್ಕೆ5) ಇಂಗ್ಲೆಂಡ್: 41 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 127 (ಜಾನಿ ಬೆಸ್ಟೊ ಬ್ಯಾಟಿಂಗ್ 47, ಜೋ ರೂಟ್ ಬ್ಯಾಟಿಂಗ್ 66, ಲಸಿತ್ ಎಂಬುಲ್ದೆನಿಯಾ 55ಕ್ಕೆ2) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.