ಟೆಸ್ಟ್: ಭಾರತಕ್ಕೆ ಐತಿಹಾಸಿಕ ಗೆಲುವು, ಇಲ್ಲಿವೆ ಸ್ವಾರಸ್ಯಕರ ಸಂಗತಿ ಬ್ರಿಸ್ಬೇನ್‌: ಇಲ್ಲಿನ ‘ಗಾಬಾ’ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯವನ್ನು 3 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಭಾರತವು 4 ಪಂದ್ಯಗಳ ಟೆಸ್ಟ್ ಸರಣಿಯನ್ನು 2–1 ಅಂತರದಿಂದ ತನ್ನದಾಗಿಸಿಕೊಂಡಿದೆ. ‘ಗಾಬಾ ಟೆಸ್ಟ್’ನಲ್ಲಿ ಭಾರತ ಜಯ ಗಳಿಸಿದ್ದು ಒಂದು ಸಾಧನೆಯಾದರೆ, ಆಸ್ಟ್ರೇಲಿಯಾ ಸೋಲನುಭವಿಸಿದ್ದೂ ವಿಶೇಷವೇ! ಓದಿ:2-1 ರಿಂದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಭಾರತ ‘ಗಾಬಾ ಟೆಸ್ಟ್’ಗೆ ಸಂಬಂಧಿಸಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯು (ಐಸಿಸಿ) ಹಲವು ಸ್ವಾರಸ್ಯಕರ ಸಂಗತಿಗಳನ್ನು ಟ್ವೀಟ್‌ ಮೂಲಕ ಹಂಚಿಕೊಂಡಿದೆ. ‘ಕಳೆದ ಬಾರಿ ಆಸ್ಟ್ರೇಲಿಯಾವು ಗಾಬಾದಲ್ಲಿ ಸೋಲನುಭವಿಸಿದ್ದು ಯಾವಾಗ... * ಜಾರ್ಜ್‌ ಎಚ್.ಡಬ್ಲ್ಯು. ಬುಷ್ ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಗಳಿಸಿದ್ದಾಗ. * ಜಾನ್ ಬೋವಿ ಅವರ ‘ಬ್ಯಾಡ್ ಮೆಡಿಸಿನ್’ ಹಾಡು ಜನಪ್ರಿಯಗೊಂಡಿದ್ದಾಗ. * ವಿರಾಟ್ ಕೊಹ್ಲಿ ಅವರು ಜನಿಸಿ 16 ದಿನ ಆಗಿದ್ದಾಗ. * ಸಚಿನ್ ತೆಂಡೂಲ್ಕರ್ ಅವರಿನ್ನೂ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಲು ಒಂದು ವರ್ಷ ಬಾಕಿ ಇದ್ದಾಗ’ ಎಂದು ಐಸಿಸಿ ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಓದಿ: : ಮಧ್ಯಮವೇಗಿ ಶಾರ್ದೂಲ್ ಠಾಕೂರ್‌ನ ಸಿಕ್ಸರ್‌ ಕಥೆ ಈ ಹಿಂದೆ ‘ಗಾಬಾ’ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲನುಭವಿಸಿದ್ದು 1988ರಲ್ಲಿ. ಅದಾದ ಬಳಿಕ ಆಸ್ಟ್ರೇಲಿಯಾ ಅಲ್ಲಿ ಸೋಲನುಭವಿಸಿರುವುದು ಇದೇ ಮೊದಲು. ... 🇺🇸 .. 🎶 #1 👶 16 🏏 ../87DmsDXDqo ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.