ಪ್ರೆಸಿಡೆಂಟ್ಸ್ ಇಲೆವನ್ ಚಾಂಪಿಯನ್‌ ಬೆಂಗಳೂರು: ಪ್ರೆಸಿಡೆಂಟ್ಸ್ ಇಲೆವನ್ ತಂಡವು ಕೆಎಸ್‌ಸಿಎ ಎಸ್‌.ಎ. ಶ್ರೀನಿವಾಸನ್ ಸ್ಮಾರಕ 23 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಚಾಂಪಿಯನ್ ಆಗಿ ಹೊರಹೊಮ್ಮಿತು. ಸಂಯುಕ್ತ ಸಿಟಿ ಇಲೆವನ್ ಎದುರಿನ ಕೊನೆಯ ಪಂದ್ಯದಲ್ಲಿ ಪ್ರೆಸಿಡೆಂಟ್ಸ್ ಇಲೆವನ್‌ ಡ್ರಾ ಸಾಧಿಸಿತು. ಟೂರ್ನಿಯ ಮುಕ್ತಾಯದ ಬಳಿಕ ಪ್ರೆಸಿಡೆಂಟ್ಸ್ ಇಲೆವನ್‌ ಹಾಗೂ ಬೆಂಗಳೂರು ಸಿಟಿ ಇಲೆವನ್ ತಲಾ 13 ಪಾಯಿಂಟ್ಸ್ ಕಲೆಹಾಕಿದ್ದವು. ಆದರೆ ಉತ್ತಮ ನೆಟ್‌ ವಿಕೆಟ್‌ ರೇಟ್‌ ಆಧಾರದಲ್ಲಿ ಪ್ರೆಸಿಡೆಂಟ್ಸ್ ಇಲೆವನ್ ಅಗ್ರಸ್ಥಾನ ತನ್ನದಾಗಿಸಿಕೊಂಡಿತು. ಸಂಕ್ಷಿಪ್ತ ಸ್ಕೋರುಗಳು: ಗ್ರೀನ್ ಸ್ಪೋರ್ಟ್ಸ್ ವಿಲೇಜ್ ಕ್ರೀಡಾಂಗಣ: ಪ್ರೆಸಿಡೆಂಟ್ಸ್ ಇಲೆವನ್‌: 67.4 ಓವರ್‌ಗಳಲ್ಲಿ 263 ಮತ್ತು ಎರಡನೇ ಇನಿಂಗ್ಸ್: 35.5 ಓವರ್‌ಗಳಲ್ಲಿ 5 ವಿಕೆಟ್‌ಗೆ 189 (ಪ್ರಜ್ವಲ್ ಪವನ್‌ 46, ಜಸ್ವಂತ್ ಆಚಾರ್ಯ ಔಟಾಗದೆ 100, ಲೋಚನ್ ಅಪ್ಪಣ್ಣ 20; ರಿಷಿ ಬೋಪಣ್ಣ ಎಸ್‌.ಎ. 52ಕ್ಕೆ 2). ಸಂಯುಕ್ತ ಸಿಟಿ ಇಲೆವನ್‌: 61.1 ಓವರ್‌ಗಳಲ್ಲಿ 246 (ಮೊಹಮ್ಮದ್ ಎ.ಜಾವದ್‌ 30, ಜಯೇಶ್ ಬಾಬು 96, ತುಷಾರ್ ಸಿಂಗ್‌ 47; ಪ್ರಜ್ವಲ್ ಕೃಷ್ಣ 42ಕ್ಕೆ 2, ಕುಶಾಲ್ ಎಸ್‌.ಗೌಡ 60ಕ್ಕೆ 2, ತೇಜಸ್‌ ಜೆ. 21ಕ್ಕೆ 4). ಫಲಿತಾಂಶ: ಪಂದ್ಯ ಡ್ರಾ. ಕಿಣಿ ಸ್ಪೋರ್ಟ್ಸ್ ಅರೆನಾ: ಸಂಯುಕ್ತ ಮೋಫುಶಿಲ್ ಇಲೆವನ್‌: 90 ಓವರ್‌ಗಳಲ್ಲಿ 9 ವಿಕೆಟ್‌ಗೆ 325. ಬೆಂಗಳೂರು ಸಿಟಿ ಇಲೆವನ್‌: 90 ಓವರ್‌ಗಳಲ್ಲಿ 7 ವಿಕೆಟ್‌ಗೆ 336 (ಮೋಹಿತ್ ಬಿ.ಎ. 85, ಶ್ರೀಹರಿ 112, ಶಾನ್ ತ್ರಿಸ್ತನ್ ಜೋಸೆಫ್‌ ಔಟಾಗದೆ 81; ಇಂದ್ರಸೇನ್ ಟಿ.ದಾನಿ 73ಕ್ಕೆ 2, ರೋಹಿತ್ ಕುಮಾರ್‌ ಎ.ಸಿ. 61ಕ್ಕೆ 3). ಫಲಿತಾಂಶ: ಪಂದ್ಯ ಡ್ರಾ. ಆದಿತ್ಯ ಗ್ಲೋಬಲ್ ಒಂದನೇ ಕ್ರೀಡಾಂಗಣ: ಮೋಫುಶಿಲ್ ಇಲೆವನ್‌: 90 ಓವರ್‌ಗಳಲ್ಲಿ 8 ವಿಕೆಟ್‌ಗೆ 326. ಬೆಂಗಳೂರು ವಲಯ: 80.4 ಓವರ್‌ಗಳಲ್ಲಿ 6 ವಿಕೆಟ್‌ಗೆ 327 (ತನಯ್‌ ವಾಲ್ಮೀಕ್‌ 25, ನಿತಿನ್ ಎಸ್‌. 116, ಆಯುಧ್ ಶರ್ಮಾ 44, ಸಾಯಿ ಪ್ರಜ್ವಲ್ ರೆಡ್ಡಿ 80; ನಿಶ್ಚಿತ್ ಎನ್. ರಾವ್‌ 43ಕ್ಕೆ 2, ದೀಪಕ್ ದೇವಾಡಿಗ 50ಕ್ಕೆ 2, ಲಿಖಿತ್ ಬನ್ನೂರ 97ಕ್ಕೆ 2). ಫಲಿತಾಂಶ: ಪಂದ್ಯ ಡ್ರಾ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.