ಫೀನಿಕ್ಸ್ ತಂಡಕ್ಕೆ ಪ್ರಶಸ್ತಿ ಬೆಂಗಳೂರು: ನಿಟ್ಟೆ ಫೀನಿಕ್ಸ್ ತಂಡವು ನಿಟ್ಟೆ ಸ್ಕೂಲ್ ಆಫ್‌ ಮ್ಯಾನೇಜ್‌ಮೆಂಟ್‌ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿತು. ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಫೀನಿಕ್ಸ್ ತಂಡವು 20 ರನ್‌ಗಳಿಂದ ನಿಟ್ಟೆ ಸ್ಟ್ರೈಕರ್ಸ್‌ ತಂಡವನ್ನು ಸೋಲಿಸಿತು. ಯಲಹಂಕದಲ್ಲಿರುವ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಂ.ರಾವಲಿ ನಾಯಕತ್ವದ ಫೀನಿಕ್ಸ್ ತಂಡವು ನಿಗದಿತ ಆರು ಓವರ್‌ಗಳಲ್ಲಿ 68 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಸ್ಟ್ರೈಕರ್ಸ್‌ 6 ಓವರ್‌ಗಳಲ್ಲಿ ಎಲ್ಲ ವಿಕೆಟ್‌ ಕಳೆದುಕೊಂಡು 48 ರನ್‌ ಮಾತ್ರ ಗಳಿಸಿತು. ಸತ್ಯ ಸಿದ್ಧಾರ್ಥ್ ಪಾಂಡಾ ಅವರು ಸರಣಿ ಶ್ರೇಷ್ಠ ಎನಿಸಿಕೊಂಡರು. ಟೂರ್ನಿಯಲ್ಲಿ ನಿಟ್ಟೆ ವಾರಿಯರ್ಸ್‌, ವೈಕಿಂಗ್ಸ್, ಚಾಲೆಂಜರ್ಸ್‌, ರೈಸರ್ಸ್‌, ಗೋಗೆಟ್ಟರ್ಸ್‌, ಹಂಟರ್ಸ್‌ ತಂಡಗಳು ಭಾಗವಹಿಸಿದ್ದವು. ಮೂರು ದಿನಗಳ ಕಾಲ ನಡೆದ ಟೂರ್ನಿಯನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಎ. ಪೊನ್ನಪ್ಪ ಉದ್ಘಾಟಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.