ಸುನಿಲ್ ಶತಕ: ಕರ್ನಾಟಕಕ್ಕೆ ಎರಡನೇ ಜಯ ಬೆಂಗಳೂರು: ಆರ್‌. ಸುನೀಲ್‌ ಅವರ ಶತಕದ ನೆರವಿನಿಂದ ಅತಿಥೇಯ ಕರ್ನಾಟಕ ತಂಡವು ನಾಗೇಶ್‌ ಟ್ರೋಫಿ ರಾಷ್ಟ್ರೀಯಅಂಧರ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಮಂಗಳವಾರ 114 ರನ್‌ಗಳಿಂದ ಉತ್ತರ ಪ್ರದೇಶವನ್ನು ಸೋಲಿಸಿತು. ಸತತ ಎರಡನೇ ಜಯ ಸಂಪಾದಿಸಿತು. ಭಾರತ ಅಂಧರ ಕ್ರಿಕೆಟ್‌ ಸಂಸ್ಥೆ ಮತ್ತು ಸಮರ್ಥನಂ ಟ್ರಸ್ಟ್‌ ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ ನಿಗದಿತ ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 248 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು. ಸುನಿಲ್‌ ಕೇವಲ 44 ಎಸೆತಗಳಲ್ಲಿ 119 ರನ್‌ ಗಳಿಸಿದರು. ಅದರಲ್ಲಿ 25 ಬೌಂಡರಿಗಳಿದ್ದವು. 74 ರನ್‌ ಗಳಿಸಿದ ಪ್ರಕಾಶ್‌ ಜಯರಾಮಯ್ಯ, ಸುನಿಲ್‌ ಅವರಿಗೆ ಉತ್ತಮ ಬೆಂಬಲ ನೀಡಿದರು. ಉತ್ತರವಾಗಿ ಉತ್ತರ ಪ್ರದೇಶ ನಿಗದಿತ ಓವರ್‌ಗಳಲ್ಲಿ ಏಳು ವಿಕೆಟ್‌ಗೆ 134 ರನ್‌ ಮಾತ್ರ ಗಳಿಸಲು ಶಕ್ತವಾಯಿತು. ಇತರ ಪಂದ್ಯಗಳಲ್ಲಿ ಆಂಧ್ರಪ್ರದೇಶ, ದೆಹಲಿ ವಿರುದ್ಧ, ತಮಿಳುನಾಡು, ಹಿಮಾಚಲ ಪ್ರದೇಶದ ವಿರುದ್ಧ, ರಾಜಸ್ತಾನ, ಮಹಾರಾಷ್ಟ್ರದ ಮೇಲೆ, ತೆಲಂಗಾಣ, ಮಣಿಪುರ ತಂಡದ ವಿರುದ್ಧ, ಕೇರಳ, ಜಾರ್ಖಂಡ್‌ ವಿರುದ್ಧ ಮತ್ತು ಹರಿಯಾಣ, ಮಧ್ಯಪ್ರದೇಶದ ವಿರುದ್ಧ, ಗೆಲುವು ಸಾಧಿಸಿದವು. ಹರಿಯಾಣದ ಪರವಾಗಿ ದೀಪಕ್‌ ಮಲಿಕ್‌ (103) ಶತಕ ಗಳಿಸಿದರು. ದಿನದ ಅತಿಹೆಚ್ಚು ರನ್‌ ಗಳಿಸಿದ್ದು ಜಮ್ಮು ಮತ್ತು ಕಾಶ್ಮೀರದ ಮೊಹ್ಮದ್‌ ಅಜೀಂ. ಅವರು 72 ಎಸೆತಗಳಲ್ಲಿ 29 ಬೌಂಡರಿ ಮತ್ತು ಒಂದು ಸಿಕ್ಸರ್‌ ಇರುವ 156 ರನ್‌ ಬಾರಿಸಿದರು. ಅವರ ಶತಕದ ಬಲದಿಂದ ಜಮ್ಮು ಮತ್ತು ಕಾಶ್ಮೀರ, ಪುದುಚೇರಿಯನ್ನು 72 ರನ್‌ಗಳಿಂದ ಸುಲಭವಾಗಿ ಸೋಲಿಸಿತು. ಸಂಕ್ಷಿಪ್ತ ಸ್ಕೋರುಗಳು: ಕರ್ನಾಟಕ: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 248 (ಆರ್‌ ಸುನಿಲ್‌ ಪ್ರಕಾಶ್‌ 119, ಜಯರಾಮಯ್ಯ 74) ಉತ್ತರ ಪ್ರದೇಶ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 134 (ಬಾಲಮುಕುಂದ ಚತುರ್ವೇದಿ 58). ಫಲಿತಾಂಶ: ಕರ್ನಾಟಕ ತಂಡಕ್ಕೆ 114 ರನ್‌ಗಳ ಗೆಲುವು. ಆಂಧ್ರಪ್ರದೇಶ: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 252 (ಟಿ. ದುರ್ಗಾ ರಾವ್‌ 95, ಅಜಯಕುಮಾರ್‌ ರೆಡ್ಡಿ 86). ದೆಹಲಿ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 157 (ಅಲೋಕ್‌ ಕುಮಾರ್‌ 38). ಫಲಿತಾಂಶ: ಆಂಧ್ರಪ್ರದೇಶ ತಂಡಕ್ಕೆ 95 ರನ್‌ಗಳ ಜಯ. ತಮಿಳುನಾಡು: 19.4 ಓವರ್‌ಗಳಲ್ಲಿ 176 (ವೆಂಕಟೇಶ್‌ ಮುನಿಕರಣ್‌ 52; ಅವಿನಾಶ್‌ ಶರ್ಮ 30ಕ್ಕೆ 3, ಹರಿಕೃಷ್ಣನ್‌ 29ಕ್ಕೆ 3). ಹಿಮಾಚಲ ಪ್ರದೇಶ 14.3 ಓವರ್‌ಗಳಲ್ಲಿ 87 (ವೆಂಕಟೇಶ ಮುನಿಕರಣ್‌ 5ಕ್ಕೆ 3). ಫಲಿತಾಂಶ: ತಮಿಳುನಾಡು ತಂಡಕ್ಕೆ 89 ರನ್‌ಗಳ ಗೆಲುವು. ಜಮ್ಮು ಮತ್ತು ಕಾಶ್ಮೀರ: 20 ಓವರ್‌ಗಳಲ್ಲಿ 3ಕ್ಕೆ 231 (ಮೊಹಮ್ಮದ್‌ ಅಜೀಂ 156). ಪುದುಚೇರಿ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 157 (ವೀರಮಣಿ 41, ಅಜಯಕುಮಾರ್‌ ಠಾಕೂರ್‌ 11ಕ್ಕೆ 3). ಫಲಿತಾಂಶ: ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ 74 ರನ್‌ಗಳ ಜಯ. ರಾಜಸ್ತಾನ: 20 ಓವರ್‌ಗಳಲ್ಲಿ 9ಕ್ಕೆ 198 (ಘೇವಾರ್‌ ರೆಬಾಡಿ 37; ಅಕ್ಷಯ್‌ ದಿಲೀಪ್‌ 40ಕ್ಕೆ 4). ಮಹಾರಾಷ್ಟ್ರ: 20 ಓವರ್‌ಗಳಲ್ಲಿ 7ಕ್ಕೆ 173 (ಪಾಂಡುರಂಗ ಜಂಬೆ 35). ಫಲಿತಾಂಶ: ರಾಜಸ್ತಾನ ತಂಡಕ್ಕೆ 25 ರನ್‌ಗಳ ಜಯ. ಹರಿಯಾಣ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 235 (ದೀಪಕ್‌ ಮಲಿಕ್‌ 103, ಚಂದನ್‌ 50 ). ಮಧ್ಯಪ್ರದೇಶ:20 ಓವರ್‌ಗಳಲ್ಲಿ 7ಕ್ಕೆ 174 (ಅಜಯವಿಲಾಸ ಸಿದಂ 50). ಫಲಿತಾಂಶ: ಹರಿಯಾಣ ತಂಡಕ್ಕೆ 61 ರನ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.