ಕರ್ನಾಟಕಕ್ಕೆ ಸತತ ಮೂರನೇ ಜಯ ಬೆಂಗಳೂರು: ಮಹಾರಾಷ್ಟ್ರ ತಂಡವನ್ನು ಎಂಟು ವಿಕೆಟ್‌ಗಳಿಂದ ಸುಲಭವಾಗಿ ಮಣಿಸಿದ ಕರ್ನಾಟಕ ತಂಡವು ನಾಗೇಶ್‌ ಟ್ರೋಫಿ ರಾಷ್ಟ್ರೀಯ ಅಂಧರ ಟಿ20 ಕ್ರಿಕೆಟ್‌ ಟೂರ್ನಿಯ ಲೀಗ್‌ ಹಂತದಲ್ಲಿ ಸತತ ಮೂರನೇ ಜಯ ಸಂಪಾದಿಸಿತು. ಭಾರತ ಅಂಧರ ಕ್ರಿಕೆಟ್‌ ಸಂಸ್ಥೆ ಮತ್ತು ಸಮರ್ಥನಂ ಟ್ರಸ್ಟ್‌ನ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯ ಪಂದ್ಯದಲ್ಲಿ ಬುಧವಾರ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಮಹಾರಾಷ್ಟ್ರ, ಅನಿಲ್‌ ಬೆಲ್ಸಾರೆ ಅವರ ಅರ್ಧಶತಕದ (47 ಎಸೆತಗಳಲ್ಲಿ 67) ನೆರವಿನಿಂದ ನಿಗದಿತ ಓವರ್‌ಗಳಲ್ಲಿ ಎಂಟು ವಿಕೆಟ್‌ ಕಳೆದುಕೊಂಡು 143 ರನ್‌ ಗಳಿಸಿತು. ಇದಕ್ಕೆ ಉತ್ತರವಾಗಿ ಬಿರುಸಿನ ಆಟವಾಡಿದ ಕರ್ನಾಟಕ ಕೇವಲ 10.4 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಕರ್ನಾಟಕದ ಪರವಾಗಿ ಲೋಕೇಶ್‌ ಆಲ್‌ರೌಂಡ್‌ ಸಾಮರ್ಥ್ಯ ತೋರಿದರು. 12 ರನ್‌ಗಳಿಗೆ ಎರಡು ವಿಕೆಟ್‌ ಪಡೆದ ಅವರು, 26 ಎಸೆತಗಳಲ್ಲಿ ಆರು ಬೌಂಡರಿಗಳಿದ್ದ 40 ರನ್‌ ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಆಂಧ್ರಪ್ರದೇಶ ಒಡಿಶಾ ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸಿತು. ತಮಿಳುನಾಡು, ಗುಜರಾತ್‌, ದೆಹಲಿ, ಜಾರ್ಖಂಡ್‌, ಹಿಮಾಚಲ ಪ್ರದೇಶ, ಮಣಿಪುರ, ಹರಿಯಾಣ ಮತ್ತು ಕೇರಳ ತಂಡಗಳು ಜಯ ಸಾಧಿಸಿದವು. ಪುದುಚೇರಿ ವಿರುದ್ಧ ತಮಿಳುನಾಡು ತಂಡದ ವೆಂಕಟೇಶ್‌ ಮುನಿಕರಣ್‌ ಶತಕ (ಔಟಾಗದೇ 108) ದಾಖಲಿಸಿದರು. ಟೂರ್ನಿಯಲ್ಲಿ ಅವರಿಗೆ ಇದು ಎರಡನೇ ಶತಕ. ಸಂಕ್ಷಿಪ್ತ ಸ್ಕೋರುಗಳು: ಮಹಾರಾಷ್ಟ್ರ 20 ಓವರ್‌ಗಳಲ್ಲಿ 8ಕ್ಕೆ 143(ಅನಿಲ್‌ ಬೆಲ್ಸಾರೆ 67; ಲೋಕೇಶ್‌ 12ಕ್ಕೆ 2). ಕರ್ನಾಟಕ: 10.4 ಓವರ್‌ಗಳಲ್ಲಿ 2ಕ್ಕೆ 144 (ಲೋಕೇಶ್‌ 40). ಫಲಿತಾಂಶ: ಕರ್ನಾಟಕ ತಂಡಕ್ಕೆ 8 ವಿಕೆಟ್‌ಗಳ ಜಯ. ಗೋವಾ: 20 ಓವರ್‌ಗಳಲ್ಲಿ 7ಕ್ಕೆ 172 (ಅಶುತೋಶ್‌ ಮಾವಸ್ಕರ್‌ 67). ಗುಜರಾತ್‌: 13.1 ಓವರ್‌ಗಳಲ್ಲಿ 2ಕ್ಕೆ 176 (ರಾಹುಲ್‌ ದಾಮೋರ್‌ ಔಟಾಗದೆ 57, ರಾಥ್ವಾ ದಿನೇಶ್‌ 51). ಫಲಿತಾಂಶ: ಗುಜರಾತ್ ತಂಡಕ್ಕೆ ಎಂಟು ವಿಕೆಟ್‌ಗಳ ಜಯ. ದೆಹಲಿ:20 ಓವರ್‌ಗಳಲ್ಲಿ 5ಕ್ಕೆ 198 (ಅಕ್ಷಯ್‌ ವರ್ಮ 42). ಮಧ್ಯಪ್ರದೇಶ: 15.1 ಓವರ್‌ಗಳಲ್ಲಿ 117 (ಮುಕೇಶ್‌ 22ಕ್ಕೆ3). ಫಲಿತಾಂಶ: ದೆಹಲಿ ತಂಡಕ್ಕೆ 81 ರನ್‌ಗಳ ಗೆಲುವು. ತಮಿಳುನಾಡು: 20 ಓವರ್‌ಗಳಲ್ಲಿ 2ಕ್ಕೆ 274 (ವೆಂಕಟೇಶ್‌ ಮುನಿಕರಣ್‌ ಔಟಾಗದೆ 108, ಮಹೇಂದ್ರನ್‌ 76). ಪುದುಚೇರಿ: 20 ಓವರ್‌ಗಳಲ್ಲಿ 5ಕ್ಕೆ 109 (ಪಿ ಅರುಣ್‌ ಕುಮಾರ್‌ 12ಕ್ಕೆ 3). ಫಲಿತಾಂಶ: ತಮಿಳುನಾಡು ತಂಡಕ್ಕೆ 165 ರನ್‌ಗಳ ಜಯ. ಜಾರ್ಖಂಡ್‌: 20 ಓವರ್‌ಗಳಲ್ಲಿ 3ಕ್ಕೆ 213 (ನಿಶಿತ್‌ ವಿಲಿಯಂ 66, ಸಂಜೀವ ಕೆರ್ಕೆಟ್ಟ ಔಟಾಗದೇ 53). ರಾಜಸ್ತಾನ: 18 ಓವರುಗಳಲ್ಲಿ 130. ಫಲಿತಾಂಶ: ಜಾರ್ಖಂಡ್‌ ತಂಡಕ್ಕೆ 83 ರನ್‌ಗಳ ಜಯ. ಉತ್ತರಖಂಡ: 20 ಓವರ್‌ಗಳಲ್ಲಿ 2ಕ್ಕೆ 223 (ಗಂಭೀರ್‌ ಸಿಂಗ್‌ ಚೌಹಾನ್‌ ಔಟಾಗದೆ 100). ಹಿಮಾಚಲ ಪ್ರದೇಶ 19 ಓವರ್‌ಗಳಲ್ಲಿ 4ಕ್ಕೆ 224 (ವಿಜಯಕುಮಾರ್‌ 99). ಫಲಿತಾಂಶ: ಹಿಮಾಚಲ ಪ್ರದೇಶ ತಂಡಕ್ಕೆ ಆರು ವಿಕೆಟ್‌ಗಳ ಜಯ. ಮಣಿಪುರ: 20 ಓವರ್‌ಗಳಲ್ಲಿ 4ಕ್ಕೆ 198 (ಪಾರಸ್‌ ಭಾಟಿಯ ಔಟಾಗದೆ 100). ತ್ರಿಪುರ: 18.4 ಓವರ್‌ಗಳಲ್ಲಿ 169 (ಸುಕಾಂತ್‌ ಶಂಕರ್‌ 44). ಫಲಿತಾಂಶ: ಮಣಿಪುರ ತಂಡಕ್ಕೆ 29 ರನ್‌ಗಳ ಜಯ. ಒಡಿಶಾ: 20 ಓವರ್‌ಗಳಲ್ಲಿ 7ಕ್ಕೆ 194 (ನಕುಲ್‌ ಬದ್ನಾಯಕ್‌ ಔಟಾಗದೆ 91). ಆಂಧ್ರಪ್ರದೇಶ: 19.5 ಓವರುಗಳಲ್ಲಿ 4ಕ್ಕೆ 195 (ಟಿ. ದುರ್ಗಾ ರಾವ್‌ ಔಟಾಗದೆ 75, ತಾಂಡವ ಕೃಷ್ಣ 61). ಫಲಿತಾಂಶ: ಆಂಧ್ರಪ್ರದೇಶ ತಂಡಕ್ಕೆ ಆರು ವಿಕೆಟ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.