: ರಿಷಭ್ ಪಂತ್ ಅಜೇಯ 58; ಭಾರತ 329ಕ್ಕೆ ಆಲೌಟ್ ಚೆನ್ನೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅಮೋಘ ಶತಕ (161) ಮತ್ತು ಅಜಿಂಕ್ಯ ರಹಾನೆ (67) ಹಾಗೂ ರಿಷಭ್ ಪಂತ್ (58*) ಆಕರ್ಷಕ ಅರ್ಧಶತಕದ ಹೊರತಾಗಿಯೂ ಟೀಮ್ ಇಂಡಿಯಾ 329 ರನ್‌ಗಳಿಗೆ ಆಲೌಟ್ ಆಗಿದೆ. ಆರು ವಿಕೆಟ್ ನಷ್ಟಕ್ಕೆ 300 ರನ್ ಎಂಬ ಮೊತ್ತದಿಂದ ದಿನದಾಟ ಮುಂದುವರಿಸಿದ ಭಾರತ ಮತ್ತಷ್ಟು 29 ರನ್ ಗಳಿಸುವಷ್ಟರಲ್ಲಿ ಉಳಿದಿರುವ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು 95.5 ಓವರ್‌ಗಳಲ್ಲಿ 329 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಎರಡನೇ ದಿನದಾಟದಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರಿಷಭ್ ಪಂತ್ ಅಜೇಯ ಅರ್ಧಶತಕ ಸಾಧನೆ ಮಾಡಿದರು. ಆದರೆ ವಿಕೆಟ್‌ನ ಮತ್ತೊಂದು ತುದಿಯಿಂದ ಉತ್ತಮ ಬೆಂಬಲ ಸಿಗದೇ ನಿರಾಸೆ ಅನುಭವಿಸಿದರು. ಇದನ್ನೂ ಓದಿ: : ಸ್ಟೋಕ್ಸ್ ಸ್ಲೆಡ್ಜಿಂಗ್; ಬ್ಯಾಟಿಂಗ್ ಮಾಡಲು ನಿರಾಕರಿಸಿದ ಪಂತ್ 77 ಎಸೆತಗಳನ್ನು ಎದುರಿಸಿದ ಪಂತ್ ಏಳು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 67 ರನ್ ಗಳಿಸಿ ಔಟಾಗದೆ ಉಳಿದರು. ಇನ್ನುಳಿದಂತೆ ಚೊಚ್ಚಲ ಪಂದ್ಯವನ್ನಾಡುತ್ತಿರುವ ಅಕ್ಷರ್ ಪಟೇಲ್ (5), ಇಶಾಂತ್ ಶರ್ಮಾ (0), ಕುಲ್‌ದೀಪ್ ಯಾದವ್ (0) ಹಾಗೂ ಮೊಹಮ್ಮದ್ ಸಿರಾಜ್ (4) ನಿರಾಸೆ ಮೂಡಿಸಿದರು. : # 329 2nd @ # ! @ImRo45 1⃣6⃣1⃣@ajinkyarahane88 6⃣7⃣@RishabhPant17 5⃣8⃣* 4⃣ . 👉 ://./Hr7Zk2kjNC ../d3Yp2KjPw2 ಇಂಗ್ಲೆಂಡ್ ಪರ ಮೊಯಿನ್ ಅಲಿ ನಾಲ್ಕು, ಒಲ್ಲಿ ಸ್ಟೋನ್ ಮೂರು, ಜ್ಯಾಕ್ ಲೀಚ್ ಎರಡು ಮತ್ತು ನಾಯಕ ಜೋ ರೂಟ್ ಒಂದು ವಿಕೆಟ್ ಕಬಳಿಸಿದರು. ಇದನ್ನೂ ಓದಿ: : ಡಾನ್ ಬ್ರಾಡ್ಮನ್ ಎಲೈಟ್ ಪಟ್ಟಿಯಲ್ಲಿ ಗುರುತಿಸಿದ ರೋಹಿತ್ ಶರ್ಮಾ ಈ ಮುನ್ನ ಮೊದಲ ದಿನದಾಟದಲ್ಲಿ ಆರಂಭಿಕ ರೋಹಿತ್ ಶರ್ಮಾ ಆಕರ್ಷಕ ಶತಕ ಸಾಧನೆ (161) ಮಾಡಿದ್ದರು. ಉಪನಾಯಕ ಅಜಿಂಕ್ಯ ರಹಾನೆ ಅರ್ಧಶತಕದ (67) ಬೆಂಬಲ ನೀಡಿದ್ದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 162 ರನ್‌ಗಳ ಜೊತೆಯಾಟ ಕಟ್ಟಿದ್ದರು. 5⃣0⃣ ! 💪💪 @ # @RishabhPant17 & 6th ! 👏👏 # 👉 ://./Hr7Zk2kjNC ../0XC6BOxDfE ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.