: ಭೋಜನ ವಿರಾಮಕ್ಕೆ ಭಾರತ 156/6; ಒಟ್ಟು ಮುನ್ನಡೆ 351 ರನ್ ಚೆನ್ನೈ: ಮೊದಲ ಇನ್ನಿಂಗ್ಸ್‌ನಲ್ಲಿ 195 ರನ್‌ಗಳ ಮಹತ್ವದ ಮುನ್ನಡೆಯೊಂದಿಗೆ ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ತಂಡವು ಉತ್ತಮ ಮುನ್ನಡೆ ಗಳಿಸಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟದ ಭೋಜನ ವಿರಾಮದ ಹೊತ್ತಿಗೆ 48 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿದೆ. ಇದರೊಂದಿಗೆ 351 ರನ್‌ಗಳ ಒಟ್ಟು ಮುನ್ನಡೆಯನ್ನು ಗಳಿಸಿದೆ. ಬೌಲರ್‌ಗಳಿಗೆನೆರವಾಗುವ ಪಿಚ್‌ನಲ್ಲಿ ಇಂಗ್ಲೆಂಡ್ ಪಾಲಿಗೆ ರನ್ ಚೇಸಿಂಗ್ ಮಾಡುವುದು ಕಷ್ಟಕರವೆನಿಸಲಿದೆ ಎಂದೇ ಅಂದಾಜಿಸಲಾಗಿದೆ. ಭಾರತಕ್ಕೆ ನಾಯಕ ವಿರಾಟ್ ಕೊಹ್ಲಿ ಹಾಗೂ ಆರ್. ಅಶ್ವಿನ್ ಆಸರೆಯಾದರು. 3 2nd @ # 102 5 . # - ://./NYmEd3qii7 ../6vez23TGiV ಒಂದು ವಿಕೆಟ್ ನಷ್ಟಕ್ಕೆ 54 ಎಂಬ ಸ್ಕೋರ್‌ನಿಂದ ಬ್ಯಾಟಿಂಗ್ ಮುಂದುವರಿಸಿದಭಾರತದ ಆರಂಭ ಉತ್ತಮವಾಗಿರಲಿಲ್ಲ. ಚೇತೇಶ್ವರ ಪೂಜಾರ (7) ರನೌಟ್ ಆದರು. ಮೊದಲ ಇನ್ನಿಂಗ್ಸ್‌ನ ಶತಕವೀರ ರೋಹಿತ್ ಶರ್ಮಾ (26) ಇಂಗ್ಲೆಂಡ್ ವಿಕೆಟ್ ಕೀಪರ್ ಬೆನ್ ಫೋಕ್ಸ್ ಅತ್ಯುತ್ತಮ ಸ್ಟಂಪಿಂಗ್‌ಗೆ ಬಲಿಯಾದರು. ಇದನ್ನೂ ಓದಿ:ಚೆನ್ನೈನಲ್ಲಿ ಎರಡನೇ ಟೆಸ್ಟ್: ತವರಿನಂಗಳದಲ್ಲಿ ಅಶ್ವಿನ್ ಸ್ಪಿನ್ ರಿಷಭ್ ಪಂತ್ (8) ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದರೂ ಯೋಜನೆ ಫಲಿಸಲಿಲ್ಲ. ಉಪನಾಯಕ ಅಜಿಂಕ್ಯ ರಹಾನೆ (10) ಸಹ ನಿರಾಸೆ ಮೂಡಿಸಿದರು. ಚೊಚ್ಚಲ ಪಂದ್ಯವನ್ನಾಡುತ್ತಿರುವ ಅಕ್ಷರ್ ಪಟೇಲ್ (7) ಬ್ಯಾಟಿಂಗ್‌ನಲ್ಲಿ ಸೈ ಎನಿಸಲಿಲ್ಲ. ಇನ್ನೊಂದೆಡೆ ಮೊದಲ ಇನ್ನಿಂಗ್ಸ್‌ನಲ್ಲಿ ಡಕ್ ಔಟ್ ಆಗಿರುವ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಆಸರೆಯಾಗಿದ್ದಾರೆ. ಇವರಿಗೆ ಆರ್. ಅಶ್ವಿನ್ ಸಾಥ್ ನೀಡಿದರು. , #’ 325. - ://./NYmEd3qii7 ../Xbv4lsmMW7 ಒಂದು ಹಂತದಲ್ಲಿ 106ಕ್ಕೆ ಆರು ವಿಕೆಟ್ ಕಳೆದುಕೊಂಡಿದ್ದ ಭಾರತ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಗೂಡಿದ ವಿರಾಟ್ ಹಾಗೂ ಅಶ್ವಿನ್ ಮುರಿಯದ ಏಳನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನೀಡಿದ್ದಾರೆ. 86 ಎಸೆತಗಳನ್ನು ಎದುರಿಸಿರುವ ವಿರಾಟ್ ಐದು ಬೌಂಡರಿಗಳ ನೆರವಿನಿಂದ 38 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನೊಂದೆಡೆ ಅಶ್ವಿನ್ 38 ಎಸೆತಗಳಲ್ಲಿ ಐದು ಬೌಂಡರಿಗಳಿಂದ 34 ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ. ಇಂಗ್ಲೆಂಡ್ ಪರ ಜ್ಯಾಕ್ ಲೀಚ್ ಮೂರು ಮತ್ತು ಮೊಯಿಲ್ ಅಲಿ ಎರಡು ವಿಕೆಟ್ ಕಿತ್ತು ಮಿಂಚಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.