| ನಾಲ್ಕನೇ ದಿನದಾಟ ಆರಂಭ: ಇಂಗ್ಲೆಂಡ್‌ಗೆ ಆರಂಭಿಕ ಆಘಾತ ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಆರಂಭವಾಗಿದ್ದು, ಇಂಗ್ಲೆಂಡ್‌ ಆರಂಭಿಕ ಆಘಾತ ಎದುರಿಸಿದೆ. ಮಂಗಳವಾರ 429 ರನ್ ಗುರಿ ಬೆನ್ನತ್ತಿರುವ ಇಂಗ್ಲೆಂಡ್‌ ಪಡೆ 32 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 82 ರನ್‌ ಗಳಿಸಿದೆ. ಡ್ಯಾನ್ ಲಾರೆನ್ಸ್ 26 ರನ್‌ ಗಳಿಸಿ ಆರ್‌.ಅಶ್ವಿನ್‌ ಸ್ಪಿನ್‌ ಬಲೆಗೆ ಬಿದ್ದರು. ಸದ್ಯ ಜೋ ರೂಟ್ ಔಟಾಗದೆ 15 ಹಾಗೂ ಬೆನ್ ಸ್ಟೋಕ್ಸ್‌ 7 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಸೋಮವಾರ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ನೀಡಿರುವ 482 ರನ್‌ ಗುರಿ ಬೆನ್ನತ್ತಿರುವ ಇಂಗ್ಲೆಂಡ್‌ಗೆ ಆರಂಭದಲ್ಲೇ ಅಕ್ಷರ್ ಪಟೇಲ್ ಹಾಗೂ ಆರ್.ಅಶ್ವಿನ್ ಆಘಾತ ನೀಡಿದ್ದರು. 2nd . 32.1: (19), 4 , 86/4 ://./Hr7Zk2BVcc # @ 4. 🏴󠁧󠁢󠁥󠁮󠁧󠁿 4 - ://./Hr7Zk2kjNC # @ ../5WskxRshjF ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.