: ಪಿಂಕ್ ಬಾಲ್ ಟೆಸ್ಟ್‌ಗೆ ಬೆಸ್ಟೊ ಚೆನ್ನೈ: ಅಹಮದಾಬಾದಿನಲ್ಲಿ ಫೆ. 24ರಿಂದ ಆರಂಭವಾಗಲಿರುವ ಹಗಲು–ರಾತ್ರಿ ಟೆಸ್ಟ್‌ ಪಂದ್ಯದಲ್ಲಿ ಆಡುವ ಇಂಗ್ಲೆಂಡ್ ತಂಡದಲ್ಲಿ ವಿಕೆಟ್‌ಕೀಪರ್ ಜಾನಿ ಬೆಸ್ಟೊ ಮತ್ತು ಬೌಲರ್ ಮಾರ್ಕ್ ವುಡ್ ಆಡಲಿದ್ದಾರೆ. ಮಂಗಳವಾರ ಎರಡನೇ ಟೆಸ್ಟ್‌ನಲ್ಲಿ ಸೋತ ನಂತರ, ಸರಣಿಯ ಮೂರನೇ ಪಂದ್ಯದಲ್ಲಿ ಆಡುವ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಯಿತು. ತಂಡ: ಜೋ ರೂಟ್ (ನಾಯಕ), ಜೇಮ್ಸ್ ಆ್ಯಂಡರ್ಸನ್, ಜೋಫ್ರಾ ಆರ್ಚರ್, ಜಾನಿ ಬೆಸ್ಟೊ, ಡಾಮ್ನಿಕ್ ಬೆಸ್, ಸ್ಟುವರ್ಟ್‌ ಬ್ರಾಡ್, ರೋರಿ ಬರ್ನ್ಸ್, ಜ್ಯಾಕ್ ಕ್ರಾಲಿ, ಬೆನ್ ಫೋಕ್ಸ್‌, ಡ್ಯಾನ್ ಲಾರೆನ್ಸ್, ಜ್ಯಾಕ್ ಲೀಚ್, ಒಲಿ ಪೊಪ್, ಡಾಮ್ ಸಿಬ್ಲಿ, ಬೆನ್ ಸ್ಟೋಕ್ಸ್‌, ಒಲಿ ಸ್ಟೋನ್,ಕ್ರಿಸ್ ವೋಕ್ಸ್‌, ಮಾರ್ಕ್ ವುಡ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.