ಅರ್ಜುನ್‌ಗೆ ಕಂಚು ದಾವಣಗೆರೆ: ಕರ್ನಾಟಕದ ಅರ್ಜುನ್‌ ಹಲಕುರ್ಕಿಅವರು ಇಟಲಿಯ ರೋಮ್‌ನಲ್ಲಿ ಆರಂಭಗೊಂಡ ಮ್ಯಾಟಿಯೊ ಪೆಲಿಕಾನ್ ರ‍್ಯಾಂಕಿಂಗ್ ಸರಣಿಯಲ್ಲಿ (ರೋಮ್ ರ‍್ಯಾಂಕಿಂಗ್ ಸೀರೀಸ್) ಗ್ರೆಕೊ ರೋಮನ್ ಕುಸ್ತಿ 55 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಶುಕ್ರವಾರ ನಡೆದ ಪಂದ್ಯದಲ್ಲಿ ಪೋರ್ಚುಗಲ್‌ನ ಕಾರ್ಡೊಸೊ ಆಲಿವ್ ಎ.ಅವರನ್ನು 8–0 ಅಂತರದಿಂದಮಣಿಸಿ ಪದಕವನ್ನು ತಮ್ಮದಾಗಿಸಿಕೊಂಡರು. ಸರಿತಾಗೆ ಬೆಳ್ಳಿ: ಏಷ್ಯನ್ ಚಾಂಪಿಯನ್‌ ಸರಿತಾ ಮೋರ್‌ ಅವರು ಮಹಿಳೆಯರ 57 ಕೆಜಿ ವಿಭಾಗದ ಫೈನಲ್‌ ಬೌಟ್‌ನಲ್ಲಿ ಬಲ್ಗೇರಿಯಾದ 2–4ರಿಂದ ಗಿಲಿಯಾ ಎದುರು ಸೋತು ಬೆಳ್ಳಿಪದಕ ತಮ್ಮದಾಗಿಸಿಕೊಂಡರು. ಅಂಧರ ವಾಲಿಬಾಲ್‌: ‘ದೀಪಾಂಜಲಿ’ಗೆ ಜಯ ಚಿತ್ರದುರ್ಗ: ಬೆಂಗಳೂರಿನ ದೀಪಾಂಜಲಿ ಅಂಧರ ತಂಡವು ಇಲ್ಲಿ ನಡೆಯುತ್ತಿರುವ ಅಂಧರ ರಾಜ್ಯಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಇಲ್ಲಿಯ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ತಾಲ್ಲೂಕಿನ ಮಾಳಪ್ಪನಹಟ್ಟಿಯ ತೀಕ್ಷ್ಣ ಅಂಧ ಮಕ್ಕಳ ವಸತಿಶಾಲೆ ಆಯೋಜಿಸಿರುವ ಟೂರ್ನಿಯಲ್ಲಿ ಈ ತಂಡ ರಾಣೆಬೆನ್ನೂರು ತಂಡವನ್ನು 2–1ರಿಂದ ಮಣಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.