ವಿಜಯ್ ಹಜಾರೆ ಟ್ರೋಫಿ: ಕರ್ನಾಟಕಕ್ಕೆ ಕೇರಳದ ಸವಾಲು ನವದೆಹಲಿ: ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಸೋಮವಾರ ಕೇರಳವನ್ನು ಎದುರಿಸಲಿದೆ.ದೆಹಲಿಯ ಪಾಲಂನ ಏರ್‌ಫೊರ್ಸ್‌ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಅನುಭವಿ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ ಮತ್ತು ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ ಮರಳಿರುವುದರಿಂದ ಕರ್ನಾ ಟಕ ತಂಡದ ಬಲ ವರ್ಧನೆಯಾಗಿದೆ. ಉತ್ತಮ ಫಾರ್ಮ್‌ನಲ್ಲಿರುವ ಕೆ.ವಿ. ಸಿದ್ಧಾರ್ಥ್ ಕಣಕ್ಕಿಳಿಯುವುದು ಬಹು ತೇಕ ಖಚಿತ. ವೇಗಿ ಅಭಿಮನ್ಯು ಮಿಥುನ್‌, ಸ್ಪಿನ್ನರ್‌ಗಳಾದ ಶ್ರೇಯಸ್ ಗೋಪಾಲ್‌ ಹಾಗೂ ಜೆ ಸುಚಿತ್ ಬೌಲಿಂಗ್‌ನಲ್ಲಿ ಮಿಂಚುತ್ತಿರುವುದರಿಂದ ಅವರ ಮೇಲೆ ಭರವಸೆ ಇದೆ. ಕೇರಳ ತಂಡವು ಲೀಗ್ ಹಂತದಲ್ಲಿ ಕರ್ನಾಟಕ ವಿರುದ್ಧ ಸೋತಿತ್ತು. ತಂಡದಲ್ಲಿರುವ ಕನ್ನಡಿಗ ರಾಬಿನ್ ಉತ್ತಪ್ಪ ಟೂರ್ನಿಯಲ್ಲಿ ಇದುವರೆಗೆ ಎರಡು ಶತಕಗಳನ್ನು ದಾಖಲಿಸಿದ್ದಾರೆ. ಪಂದ್ಯ ಆರಂಭ: ಬೆಳಿಗ್ಗೆ 9ಕ್ಕೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.