ಒಲಿಂಪಿಕ್ಸ್‌: ಬಿಡ್‌ ಸಲ್ಲಿಕೆಗೆ ಕೇಜ್ರಿವಾಲ್ ಒಲವು ನವದೆಹಲಿ: ದೆಹಲಿಯಲ್ಲಿ 2048ರಲ್ಲಿ ಒಲಿಂಪಿಕ್ ಕೂಟವನ್ನು ಆಯೋಜಿಸಲು ಬಿಡ್ ಸಲ್ಲಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ. 1951ರಲ್ಲಿ ದೆಹಲಿಯಲ್ಲಿ ಮೊದಲ ಏಷ್ಯನ್ ಗೇಮ್ಸ್‌ ಆಯೋಜನೆಯಾಗಿತ್ತು. 1982ರಲ್ಲಿ ಒಂಬತ್ತನೇ ಏಷ್ಯನ್ ಗೇಮ್ಸ್‌ ಮತ್ತು 2010ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ ಕೂಡ ಇಲ್ಲಿ ಆಯೋಜನೆಯಾಗಿದ್ದವು. ’ಒಲಿಂಪಿಕ್ ಕೂಟಕ್ಕೆ ಅಗತ್ಯವಿರುವ ಎಲ್ಲ ಮೂಲಸೌಲಭ್ಯಗಳನ್ನೂ ಇಲ್ಲಿ ಅಭಿವೃದ್ಧಿಪಡಿಸಲಾಗುವುದು. ದೆಹಲಿಯಲ್ಲಿ ಒಲಿಂಪಿಕ್ ಆಯೋಜನೆ ಮಾಡಬೇಕೆನ್ನುವುದು ನಮ್ಮ ದೊಡ್ಡ ಕನಸು‘ ಎಂದು ಕೇಜ್ರಿವಾಲ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.