ಸೌತಾಂಪ್ಟನ್‌ನಲ್ಲಿ ಫೈನಲ್; ಸೀಮಿತ ಸಂಖ್ಯೆಯ ಪ್ರೇಕ್ಷಕರಿಗೆ ಅವಕಾಶ ಸಾಧ್ಯತೆ ಲಂಡನ್‌‌‌: ಅಂತರ ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಆಯೋಜಿಸುತ್ತಿರುವ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯವು ಸೌತಾಂಪ್ಟನ್‌ನ ಹ್ಯಾಂಪ್‌ಶೈರ್ ಬೌಲ್‌ ಕ್ರೀಡಾಂಗಣದಲ್ಲಿ 'ಬಯೋ-ಸೆಕ್ಯೂರ್ ಬಬಲ್‌' ನಿಯದನ್ವಯ ಆಯೋಜನೆಯಾಗಲಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಫೈನಲ್ ಪಂದ್ಯವು ಜೂನ್ 18ರಿಂದ 22ರ ವರೆಗೆ ಆಯೋಜನೆಯಾಗಲಿದೆ. ಜೂ.23 ಮೀಸಲು ದಿನವಾಗಿ ಪರಿಗಣಿಸಲಾಗಿದೆ. ಈ ಮೊದಲು ಡಬ್ಲ್ಯುಟಿಸಿ ಫೈನಲ್ ಪಂದ್ಯವನ್ನು ಲಾರ್ಡ್ಸ್‌ನಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಬಳಿಕ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಕ್ರಿಕೆಟ್ ಮಂಡಳಿ (ಇಸಿಬಿ) ಜೊತೆಗಿನ ಮಾತುಕತೆಯ ಬಳಿಕ ಐಸಿಸಿ ಬುಧವಾರದಂದು ಹೊಸ ತಾಣವನ್ನು ಪ್ರಕಟಿಸಿದೆ. ://./aTRWkb6pOF 👇🏾 ಆಟಗಾರರಿಗೆ ಗರಿಷ್ಠ ಸುರಕ್ಷತೆ ಒದಗಿಸುವುದರ ಜೊತೆಗೆ ಕೋವಿಡ್-19 ಸೋಂಕಿನ ಅಪಾಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮುನ್ನಚ್ಚೆರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದನ್ನೂ ಓದಿ: | ಟೆಸ್ಟ್ ಸರಣಿಯಲ್ಲಿ ಮಿಂಚಿದ್ದ ಅಶ್ವಿನ್; ಐಸಿಸಿ ತಿಂಗಳ ಆಟಗಾರ ಸೌತಾಂಪ್ಟನ್‌ನಲ್ಲಿ ಜೀವ ಸುರಕ್ಷಾ ವಾತಾವರಣದಲ್ಲಿ ಇಸಿಬಿ ಈಗಾಗಲೇಕ್ರಿಕೆಟ್ ಆಯೋಜಿಸಿದೆ. ವಿಶ್ವದರ್ಜೆಯ ಗುಣಮಟ್ಟದ ಸೌಲಭ್ಯ ಹಾಗೂ ತರಬೇತಿ ಕೇಂದ್ರಗಳು ಲಭ್ಯವಿರಲಿದೆ. ಅದೇ ಹೊತ್ತಿಗೆ ಬ್ರಿಟನ್‌ನಲ್ಲಿ ಕೋವಿಡ್-19 ಲಾಕ್‌ಡೌನ್ ಸಡಿಲಗೊಳಿಸುವ ಪ್ರಕ್ರಿಯೆ ಯೋಜನೆಯಂತೆ ಮುಂದುವರಿದ್ದಲ್ಲಿ ಸೀಮಿತ ಸಂಖ್ಯೆಯ ಅಭಿಮಾನಿಗಳಿಗೆ ಪಂದ್ಯ ವೀಕ್ಷಿಸುವ ಅವಕಾಶ ಲಭ್ಯವಾಗುವ ಸಾಧ್ಯತೆಯಿದೆ. 🤜🤛 ! . #WTC21 | # ../X3KcNrUTJ1 'ಬಯೋ-ಸೆಕ್ಯೂರ್ ಬಬಲ್‌' ಎಂದರೇನು? ಕೋವಿಡ್-19 ಸೋಂಕಿನ ಅಪಾಯವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಬಯೋ-ಸೆಕ್ಯೂರ್ ಬಬಲ್ ನಿಯಮದಡಿಯಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಇದನ್ನೂ ಓದಿ:ಡಬ್ಲುಟಿಸಿ ಫೈನಲ್ ಪ್ರವೇಶ ನಿಯಮ ತಿದ್ದುಪಡಿಗೆ ರವಿಶಾಸ್ತ್ರಿ ಕಿಡಿ ಇದರಲ್ಲಿ ಪ್ಲೇಯರ್ಸ್ ಐಸೋಲೇಷನ್, ಸೆಲ್ಫ್ ಕ್ವಾರಂಟೈನ್ ಒಳಗೊಂಡಿದ್ದು, ಆಟಗಾರರು ತಮ್ಮ ಕುಟುಂಬ ಸೇರಿದಂತೆ ಹೊರ ಜಗತ್ತಿನ ಸಂಪರ್ಕದಲ್ಲಿರುವುದಿಲ್ಲ. ಇನ್ನು ಮುಚ್ಚಿದ ಕ್ರೀಡಾಂಗಣದಲ್ಲಿ ಟೂರ್ನಿ ಆಯೋಜನೆ ಇದರ ಭಾಗವಾಗಿದ್ದರೂ ಸಹ ಭಾರತ-ನ್ಯೂಜಿಲೆಂಡ್ ನಡುವಣ ಫೈನಲ್ ಪಂದ್ಯಕ್ಕೆ ಪ್ರೇಕ್ಷಕರಿಗೆ ಅವಕಾಶ ನೀಡಲಾಗುವುದೇ ಎಂಬುದನ್ನು ಕಾದು ನೋಡಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.