ಮಗದೊಂದು ಸ್ಮರಣೀಯ ದಾಖಲೆ ಬರೆದ ಕಿಂಗ್ ಕೊಹ್ಲಿ ಅಹಮದಾಬಾದ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಅಂತರ ರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 3,000 ರನ್‌ಗಳ ಮೈಲುಗಲ್ಲು ತಲುಪಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೆ ವಿರಾಟ್ ಕೊಹ್ಲಿ ಭಾಜನವಾಗಿದ್ದಾರೆ. ಪ್ರವಾಸಿ ಇಂಗ್ಲೆಂಡ್ ವಿರುದ್ಧ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೂತನ ದಾಖಲೆ ಬರೆದರು. ಇದನ್ನೂ ಓದಿ: | ಎರಡನೇ ಟಿ–20ಯಲ್ಲಿ ಇಶಾನ್‌–ಕೊಹ್ಲಿ ಅಬ್ಬರದಾಟಕ್ಕೆ ಒಲಿದ ಜಯ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದ ವಿರಾಟ್, ದ್ವಿತೀಯ ಪಂದ್ಯದಲ್ಲಿ ಲಯ ಕಂಡುಕೊಂಡರು. ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಅಜೇಯ 73 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. 3️⃣0️⃣0️⃣0️⃣ T20 🙌🏻🔝 👑👌🏻@ # 🇮🇳 # @ ../C8zxhBjtmX 49 ಎಸೆತಗಳನ್ನು ಎದುರಿಸಿದವಿರಾಟ್ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸೇರಿದ್ದವು. ಈ ಮೂಲಕ 165 ರನ್‌ಗಳ ಗುರಿಯನ್ನು ಇನ್ನು 13 ಎಸೆತಗಳು ಬಾಕಿ ಉಳಿದಿರುವಂತೆಯೇ ಮೂರು ವಿಕೆಟ್ ನಷ್ಟಕ್ಕೆ ತಲುಪಿತ್ತು. ಇದುವರೆಗೆ 87 ಟ್ವೆಂಟಿ-20 ಅಂತರ ರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ವಿರಾಟ್ 81 ಇನ್ನಿಂಗ್ಸ್‌ಗಳಲ್ಲಿ ಒಟ್ಟು 3,001 ರನ್ ಕಲೆ ಹಾಕಿದ್ದಾರೆ. ಅಲ್ಲದೆ ಚುಟುಕು ಪ್ರಕಾರದಲ್ಲೂ 50ರ ಸರಾಸರಿ (50.86) ಕಾಪಾಡಿಕೊಂಡಿದ್ದಾರೆ. ಇದರಲ್ಲಿ 26 ಅರ್ಧಶತಕಗಳು ಸೇರಿವೆ. 2⃣6⃣ T20I 5⃣0⃣! 👏👏 @ 35- - ! 👍👍@ # # 👉 ://./gU4AGqh8Um ../8OBawNWdAB ಟ್ವೆಂಟಿ-20 ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಸರದಾರರು: ವಿರಾಟ್ ಕೊಹ್ಲಿ(ಭಾರತ): 3001 ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್): 2839 ರೋಹಿತ್ ಶರ್ಮಾ (ಭಾರತ): 2773 ಆ್ಯರೋನ್ ಫಿಂಚ್ (ಆಸ್ಟ್ರೇಲಿಯಾ): 2346 ಶೋಯಬ್ ಮಲಿಕ್ (ಪಾಕಿಸ್ತಾನ): 2335 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.