ಹೊಸ ಅವತಾರದಲ್ಲಿ ಧೋನಿ ಪ್ರತ್ಯಕ್ಷ; ಊಹಿಸಬಲ್ಲೀರಾ? ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೊಸ ಅವತಾರದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಇದು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನುಂಟು ಮಾಡಿದೆ. ಸ್ಟಾರ್ ಸ್ಪೋರ್ಟ್ಸ್ ಇಂಡಿಯಾ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಧೋನಿ ನೂತನ ಲುಕ್ ಬಿಡುಗಡೆಗೊಳಿಸಿದೆ. ಕೆಲವೇ ಹೊತ್ತಿನಲ್ಲಿ ಇದು ವೈರಲ್ ಆಗಿದೆ. ಮಗದೊಂದು ವಿಡಿಯೋದಲ್ಲಿ ಈ ಮಂತ್ರದ ಹಿಂದಿನ ರಹಸ್ಯವು ಬೇಗನೇ ಬಯಲಾಗಲಿದೆ ಎಂದು ಧೋನಿತಿಳಿಸುತ್ತಾರೆ. ಮೊದಲ ನೋಟಕ್ಕೆ ಬೌದ್ಧ ಭಿಕ್ಷು ರೀತಿಯಲ್ಲಿ ಗೋಚರಿಸಿದ್ದಾರೆ. ತಮ್ಮ ಕ್ರಿಕೆಟ್ ಜೀವನದಲ್ಲಿ ಉದ್ದನೆಯ ಕೂದಲು ಸೇರಿದಂತೆ ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿರುವ ಧೋನಿ ಈ ನೂತನ ಲುಕ್ ಹೆಚ್ಚಿನ ಕುತೂಹಲಕೆರಳಿಸಿದೆ. 😮😮😮 - #' ! 🙊 ? ../Mx27w3uqQh ಕ್ರಿಕೆಟ್ ಜೀವನಕ್ಕೆ ಕಾಲಿರಿಸಿದ್ದ ಆರಂಭಿಕ ಕಾಲಘಟ್ಟದಲ್ಲಿ ಉದ್ದನೆಯ ಕೂದಲು ಬಿಟ್ಟುಕೊಂಡಿದ್ದ ಧೋನಿ, ನಾಯಕರಾದ ಬಳಿಕ ಕೂದಲು ಕತ್ತರಿಸಿದ್ದರು. ಹಾಗೆಯೇ ಸೇನೆಯಲ್ಲಿ ಗೌರವಾನ್ವಿತ ಹುದ್ದೆ ಪಡೆದ ಬಳಿಕ ಆರ್ಮಿ ಶೈಲಿಯಲ್ಲಿ ಕೂದಲು ಬೆಳೆಸಿದ್ದರು. ಬಿಳಿ ಗಡ್ಡದಲ್ಲೂ ಧೋನಿ ಹೆಚ್ಚಿನ ಜನಪ್ರಿಯತೆ ಗಿಟ್ಟಿಸಿದ್ದರು. ಇದನ್ನೂ ಓಧಿ:ಮತ್ತೆ ಪ್ಯಾಡ್ ಕಟ್ಟಿ ನೆಟ್ಸ್‌ಗಿಳಿದು ಸಿಕ್ಸರ್ ಸಿಡಿಸಿದ ಕ್ಯಾಪ್ಟನ್ ಕೂಲ್ ಧೋನಿ ಮುಂಬರುವ ಐಪಿಎಲ್ ಟೂರ್ನಿಯ ವಾಣಿಜ್ಯ ಜಾಹೀರಾತು ಚಿತ್ರಿಕರಣಕ್ಕಾಗಿ ಧೋನಿ ಸನ್ಯಾಸಿಯಂತೆ ವೇಷಭೂಷಣ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಅಂದ ಹಾಗೆ ಬಹುನಿರೀಕ್ಷಿತ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಏಪ್ರಿಲ್ 10ರಂದು ಆರಂಭವಾಗಲಿದೆ. … … 🤯 ! ' . 😎 ../km9AQ93Dek ಸದ್ಯ ಧೋನಿ ಹೊಸ ಅವತಾರಕ್ಕೆ ಅಭಿಮಾನಿಗಳು ನೀಡಿರುವ ಕಾಮೆಂಟ್‌ಗಳನ್ನು ಆನಂದಿಸಿ... . . ' . ../Bgw7nh4u3e . , ! 😄 ../kJ0SWgBZOf . , ../tSauCJ4FAM ' 22 39. :## ../TLsqoB3Ybf ' 2018 . ../6wBY7Gv4N2 @ 😇🤩# • # • @ ../aAJ1w8mQso ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.