2021: ಆರ್‌ಸಿಬಿಗೆ ಫಿನ್ ಅಲೆನ್ ಸೇರ್ಪಡೆ ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳುರು ತಂಡಕ್ಕೆ ನ್ಯೂಜಿಲೆಂಡ್‌ನ ವಿಕೆಟ್‌ಕೀಪರ್ ಫಿನ್ ಅಲೆನ್ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಆರ್‌ಸಿಬಿಯಲ್ಲಿದ್ದ ಜೋಶ್ ಫಿಲಿಪ್ ಅವರು ಈ ಬಾರಿ ಟೂರ್ನಿಗೆ ಅಲಭ್ಯರಾಗಿದ್ದಾರೆ. ಆದ್ದರಿಂದ ಅವರ ಸ್ಥಾನಕ್ಕೆ ಫಿನ್ ಅವಕಾಶ ಗಿಟ್ಟಿಸಿದ್ದಾರೆ. ಹೋದ ವರ್ಷದ ಟೂರ್ನಿಯಲ್ಲಿ ಆರ್‌ಸಿಬಿಯಲ್ಲಿ ಜೋಶ್ ಆಡಿದ್ದರು. ಐದು ಪಂದ್ಯಗಳಲ್ಲಿ 78 ರನ್ ಗಳಿಸಿದ್ದರು. ಫಿನ್ ಅಲೆನ್‌ಗೆ ಇದು ಚೊಚ್ಚಲ ಐಪಿಎಲ್ ಟೂರ್ನಿ. ನ್ಯೂಜಿಲೆಂಡ್‌ನಲ್ಲಿ 12 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಫಿನ್ ಮೂರು ಅರ್ಧಶತಕ ಗಳಿಸಿದ್ದಾರೆ. ಅವರಿಗೆ ಮೂಲಬೆಲೆ 20 ಲಕ್ಷ ರೂಪಾಯಿ ನೀಡಿ ಖರೀದಿಸಲಾಗಿದೆ ಎಂದು ಐಪಿಎಲ್‌ ವೆಬ್‌ಸೈಟ್‌ ಪ್ರಕಟಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.