ಜೊಫ್ರಾ ಆರ್ಚರ್‌ಗೆ ನಾಳೆ ಶಸ್ತ್ರಚಿಕಿತ್ಸೆ ಲಂಡನ್: ಮೊಣಕೈ ನೋವಿನಿಂದ ಬಳಲುತ್ತಿರುವ ಇಂಗ್ಲೆಂಡ್‌ ಕ್ರಿಕೆಟ್ ತಂಡದ ವೇಗದ ಬೌಲರ್ ಜೊಫ್ರಾ ಆರ್ಚರ್‌ಗೆ ನೋವು ಶಮನಕ್ಕಾಗಿ ಇನ್ನಷ್ಟು ಚುಚ್ಚುಮದ್ದು ನೀಡಲಾಗಿದೆ. ಕೈಯಲ್ಲಿ ಆಗಿರುವ ಗಾಯಕ್ಕೆ ಸೋಮವಾರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ವಿಷಯವನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಶನಿವಾರ ತಿಳಿಸಿದ್ದು ಜನವರಿಯಿಂದ ಕಾಡುತ್ತಿರುವ ನೋವು ನಿವಾರಿಸಲು ಸರಳ ಶಸ್ತ್ರಚಿಕಿತ್ಸೆ ಅತ್ಯಗತ್ಯವಾಗಿದೆ ಎಂದು ವಿವರಿಸಿದೆ. ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡದೊಂದಿಗೆ ಬಂದಿದ್ದ ಆರ್ಚರ್ ಟಿ20 ಸರಣಿಯ ನಂತರ ತವರಿಗೆ ವಾಪಸಾಗಿದ್ದರು. ಜನವರಿಯಲ್ಲಿ ಮನೆ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಅವರ ಕೈಗೆ ಗಾಯವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ವೈದ್ಯಕೀಯ ತಂಡದ ಸಲಹೆ ಪಡೆದು ಪಂದ್ಯಗಳನ್ನು ಆಡಿದ್ದರು. ಆದರೆ ಏಕದಿನ ಸರಣಿಯಲ್ಲಿ ಆಡಲು ಸಾಧ್ಯವಿಲ್ಲ ಎಂದು ತಿಳಿಸಲಾಗಿತ್ತು ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.