: ಧವನ್‌, ಪಂತ್‌ ಅರ್ಧ ಶತಕ, ಇಂಗ್ಲೆಂಡ್‌ಗೆ 330 ರನ್‌ ಟಾರ್ಗೆಟ್‌ ಪುಣೆ: ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ಇಂಗ್ಲೆಂಡ್‌ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ 329 ರನ್‌ಗಳ ಬೃಹತ್‌ ಮೊತ್ತ ಕಲೆ ಹಾಕಿದೆ. ಶಿಖರ್‌ ಧವನ್‌ (67), ರಿಷಬ್‌ ಪಂತ್‌ (78), ಹಾರ್ದಿಕ್‌ ಪಾಂಡ್ಯ (64) ಅವರ ಸ್ಫೋಟಕ ಆಟದ ನೆರವಿನಿಂದ ಆಂಗ್ಲರಿಗೆ 330 ರನ್‌ಗಳ ಗುರಿ ನೀಡಿದೆ. ಮತ್ತೆ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತದ ಪರ ಶಿಖರ್‌ ಧವನ್‌– ರೋಹಿತ್ ಶರ್ಮಾ ಬ್ಯಾಟಿಂಗ್ ಆರಂಭಿಸಿ ಉತ್ತಮ ಜೊತೆಯಾಟವಾಡಿದರು. ಇಂಗ್ಲೆಂಡ್‌ ಪರ ಮಾರ್ಕ್ ವುಡ್ 3, ಆದಿಲ್ ರಶೀದ್ 2, ಸ್ಯಾಮ್‌ ಕರನ್‌, ರೀಸ್ ಟಾಪ್ಲೆ, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ಬೆನ್ ಸ್ಟೋಕ್ಸ್‌ ತಲಾ ಒಂದು ವಿಕೆಟ್‌ ಪಡೆದಿದ್ದಾರೆ. ಇಂಗ್ಲೆಂಡ್‌ಗೆ ಆರಂಭಿಕ ಆಘಾತ: ಇಂಗ್ಲೆಂಡ್‌ ಪರ ಬ್ಯಾಟಿಂಗ್‌ ಆರಂಭಿಸಿದ ಜೇಸನ್ ರಾಯ್ 14,ಜಾನಿ ಬೆಸ್ಟೊ 1 ರನ್‌ ಗಳಿಸಿ ಭುವನೇಶ್ವರ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ. ಸದ್ಯ ಬೆನ್ ಸ್ಟೋಕ್ಸ್‌, ಡೇವಿಡ್ ಮಲಾನ್ ಕ್ರೀಸ್‌ನಲ್ಲಿದ್ದಾರೆ. # 329 . - ://./wIhEfE5PDR # @ ../ZQS2SBwqzA ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.