ಡಿಆರ್‌ಎಸ್‌ನಲ್ಲಿ ತುಂಬ ಲೋಪ ಇದೆ: ವಿರಾಟ್ ಕೊಹ್ಲಿ ಪುಣೆ: ಇತ್ತೀಚೆಗೆ ಭಾರಿ ಚರ್ಚೆಗೆ ಒಳಗಾಗಿರುವ ‘ಅಂಪೈರ್‌ ಕಾಲ್’ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ’ತೀರ್ಪು ಮರುಪರಿಶೀಲನಾ ವ್ಯವಸ್ಥೆಯಲ್ಲಿ (ಡಿಆರ್‌ಎಸ್‌) ತುಂಬ ಲೋಪಗಳಿದ್ದು ಚೆಂಡು ವಿಕೆಟ್‌ಗೆ ಬಡಿಯುವುದು ಖಾತರಿಯಾಗಿದ್ದರೆ ಔಟ್ ಕೊಡುವುದೇ ಒಳಿತು’ ಎಂದಿದ್ದಾರೆ. ಸದ್ಯ ಇರುವ ನಿಯಮದ ಪ್ರಕಾರ ಎಲ್‌ಬಿಡಬ್ಲ್ಯುಗೆ ಸಂಬಂಧಿಸಿಅಂಪೈರ್ ನೀಡಿದ ತೀರ್ಪು ಪ್ರಶ್ನಿಸಿದರೆ ಮೂರು ಸ್ಟಂಪ್‌ಗಳಲ್ಲಿ ಯಾವುದಾದರೂ ಒಂದಕ್ಕೆ ಚೆಂಡಿನ 50 ಶೇಕಡಾ ಭಾಗ ತಾಗುವಂತಿರಬೇಕು. ‘ಡಿಆರ್‌ಎಸ್‌ ಇಲ್ಲದೇ ಇದ್ದಾಗ ಅನೇಕ ವರ್ಷ ನಾನು ಕ್ರಿಕೆಟ್ ಆಡಿದ್ದೇನೆ. ಅಂಪೈರ್ ನೀಡಿದ ತೀರ್ಪು ಬ್ಯಾಟ್ಸ್‌ಮನ್‌ಗೆ ಇಷ್ಟವಾಗಲಿ, ಆಗದಿರಲಿ ತೀರ್ಪು ಅಂತಿಮವಾಗಿರುತ್ತದೆ. ನಾಟೌಟ್ ಘೋಷಿಸಿದಾಗಲೂ ಅದೇ ರೀತಿ ಇರುತ್ತದೆ. ಸದ್ಯ ನನ್ನ ಪ್ರಕಾರ ಅಂಪೈರ್ಸ್ ಕಾಲ್ ತುಂಬ ಗಲಿಬಿಲಿ ಉಂಟುಮಾಡುತ್ತಿದೆ’ ಎಂದು ಅವರು ಸೋಮವಾರ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.